Uncategorized
ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಜಯ:ಹರ್ಷ

ಹನುಮಂತ ನಾಯಕ ಸಂಪಾದಕ. 9739109997
ಮುದಗಲ್ : ಪಟ್ಟಣ ಸಮೀಪದ ಆಮದಿಹಾಳ ಶ್ರೀಗುರು ನಿರುಪಾದೀಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಜಯ ಗಳಿಸಿದ್ದಾರೆ ಎಂದು ಮುಖ್ಯಗುರುಗಳಾದ ಎಬಿ.ಬಡಿಗೇರ ತಿಳಿಸಿದ್ದಾರೆ.
ಕೃಷಿ ವಿಶ್ವವಿದ್ಯಾಲಯ ವಿ.ಸಿ ಫಾರಂ ಮಂಡ್ಯ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಜೂನಿಯರ್ ಕರ್ನಾಟಕ ಕ್ರೀಡಾಕೂಟ ರಾಜ್ಯಮಟ್ಟದ ಜೂನಿಯರ್ ಅಂಡರ್ 20 ಬಾಲಕಿಯರ ವಿಭಾಗದ ವಿಭಾಗಿಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರಾದ ಸಹನಾ ತಂದೆ ಶಂಕ್ರಪ್ಪ, ನಿರ್ಮಲ ತಂದೆ ಅಂಬರೇಗೌಡ, ಅಶ್ವಿನಿ ತಂದೆ ಶಂಕ್ರಪ್ಪ ಭಾಗವಹಿಸಿ ಗೆಲುವು ಸಾಧಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಹನುಮಂತಪ್ಪ ಕಂದಗಲ್, ಮುಖ್ಯ ಗುರುಗಳಾದ ಎಬಿ.ಬಡಿಗೇರ್, ಮತ್ತು ದೈಹಿಕ ಶಿಕ್ಷಕರಾದ ಜಗದೀಶ್ ಕುಮಾರ್ ವಾಲ್ಮೀಕಿ ಸೇರಿ ಶಾಲಾ ಶಿಕ್ಷಕರು,ಪಾಲಕರು ಹರ್ಷ ವ್ಯಕ್ತಪಡಪೆಸಿದ್ದಾರೆ.



