ಮುದಗಲ್ ; ಪುರಸಭೆ ಸಿಬ್ಬಂದಿಗಳನ್ನು ಖಾಯಂ ಮಾಡುವಂತೆ ಸಚಿವರಿಗೆ ಪುರಸಭೆ ಅಧ್ಯಕ್ಷರು ಮನವಿ

ಹನುಮಂತ ನಾಯಕ
ಮುದಗಲ್: ಪುರಸಭೆಯಲ್ಲಿ ಸುಮಾರು 25 ವರ್ಷಗಳಿಂದ ದಿನಗೂಲಿ ಹಾಗೂ ಹೊರಗುತ್ತಿಗೆ ಆಧಾರ ಮೇಲೆ ಕಾರ್ಯ ನಿರ್ವಹಿಸುತ್ತಿರುವರನ್ನು ಕಾಯಂ ಮಾಡುವಂತೆ ಪೌರಾಡಳಿತ ಸಚಿವರಾದ ರಹೀಂಖಾನ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಹಾಗೂ
ನೀರು ಸರಬರಾಜು ಸಿಬ್ಬಂದಿಗಳು ಕಾರ್ಯನಿರ್ವಾಸುತ್ತಿದ್ದು. ಅವರಿಗೆ ಪುರಸಭೆಯಿಂದ ಪ್ರತಿ ತಿಂಗಳು ವೇತನ ಪಾವತಿಸುವು ತುಂಬಾ ಕಷ್ಟ ಸಾಧ್ಯವಾಗುತ್ತಿದ್ದು. ಹಾಗೂ ಸ್ವಚ್ಚತೆ ಕಾರ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಾಹನ ಚಾಲಕರು& ಸ್ಯಾನಿಟರಿ ಸುಪ್ರವೈಸರ್, ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್ ನೌಕರರ ಹುದ್ದೆಯನ್ನು ಕೂಡಲೇ ಖಾಯಂಮಾತಿ/ನೇರಪಾವತಿ ಮಾಡಿದಲ್ಲಿ ಸದರಿ ನೌಕರರಿಗೆ ಅನೂಕೂಲವಾಗುತ್ತದೆ. ಆದ್ದರಿಂದ ನೀವುಗಳು ಪುರಸಭೆಯ ಈ ಎಲ್ಲಾ ದಿನಗೂಲಿ ಹಾಗೂ ಹೊರಗುತ್ತಿಗೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಖಾಯಂ ಮಾಡುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸದಸ್ಯ ಹನುಮಂತ ವಾಲ್ಮೀಕಿ ಸೇರಿದಂತೆ ಇನ್ನಿತರರು ಇದ್ದರು.