ಲಿಂಗಸ್ಗೂರು; ಪಿಕಾರ್ಡ ಬ್ಯಾಂಕ್ ಚುನಾವಣೆ ಕಾಂಗ್ರೆಸ್ಸ ಬೆಂಬಲಿತ ಅಭ್ಯರ್ಥಿಗಳ ಮೇಲುಗೈ

ಹನುಮಂತ ನಾಯಕ ಸಂಪಾದಕ. 9739109997
ಲಿಂಗಸುಗೂರು: ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ (ಪಿಕಾರ್ಡ) 14 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಂಎಸ್ಸಿ ಶರಣಗೌಡ ಬಯ್ಯಾಪುರ ಕಾಂಗ್ರೆಸ್ಸ್ ಹಾಗೂ ಮಾಜಿ ಶಾಸಕ ಡಿ ಎಸ್ ಹುಲಗೇರಿ ಕಾಂಗ್ರೆಸ್ಸ ಪಕ್ಷದ ಗುಂಪಿನ ಬೆಂಬಲಿತ ಅಭ್ಯರ್ಥಿಗಳು ಜಯಸಾಧಿಸಿದ್ದು ಆಡಳಿತ ಚುಕಾಣಿ ಇಡಲಿದ್ದಾರೆ.
ಫಲಿತಾಂಶ ಕೋಠಾ ಕ್ಷೇತ್ರ ಚನ್ನಬಸಪ್ಪ ತಂ ಚನ್ನವೀರಪ್ಪ, ಆನೆಹೊಸೂರ ಬಸನಗೌಡ ತಂ ಸಂಗಣ್ಣ ಮೇಟಿ, ಮಸ್ಕಿ ಮಲ್ಲಿಕಾರ್ಜುನ ತಂ ಶರಣಪ್ಪ ಪರಡಿ, ನಾಗರಹಾಳ ವೀರುಪಾಕ್ಷಪ್ಪ ತಂ ದೇವೆಂದ್ರಪ್ಪ, ಮಾವಿನಭಾವಿ ವೆಂಕನಗೌಡ ತಂ ಗುರುಲಿಂಗಪ್ಪ, ನಿಲೋಗಲ್ ಶಿವನಗೌಡ ತಂ ಸಿದ್ದನಗೌಡ, ನಾಗಲಾಪೂರ ಸಿದ್ದನಗೌಡ ತಂ ಬಸನಗೌಡ, ಮುದಗಲ್ ಹುಸೇನಪ್ಪ ತಂ ಹನುಮಪ್ಪ, ಗುರುಗುಂಟಾ ಭೀಮರಾಯ ತಂ ಬಾಲಪ್ಪ, ಸಂತೆಕೆಲ್ಲೂರ ಶಿವ ಗ್ಯಾನಪ್ಪ ತಂ ಭೀರಪ್ಪ, ಆಮದಿಹಾಳ ಶರಣಪ್ಪ ತಂ ಬಸಣ್ಣ ಕಾರಲ್ಲಕುಂಟಿ, ಲಿಂಗಸುಗೂರ ಯಂಕಪ್ಪ ಗಂ ಯಂಕಪ್ಪ, ಮಟ್ಟೂರ ಶಂಭುಲಿಂಗಮ್ಮ ಗಂ ಶರಣಪ್ಪ, ಲಿಂಗಸುಗೂರ ಸಿದ್ದರಾಮೇಶ್ವರ ತಂ ಚನ್ನವೀರಪ್ಪ ಇವುರುಗಳು ಆಯ್ಕೆಯಾಗಿದ್ದಾರೆ ಗೆಲವು ಸಾಧಿಸಿದ ಅಭ್ಯರ್ಥಿಗಳಿಗೆ ಕಾಂಗ್ರೆಸ್ಸ್ ಹಾಗೂ ಬಿಜೆಪಿ ಮುಖಂಡರು ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಾಗಲಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶರಣಬಸವರಾಜ ಪಾಟೀಲ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಇದ್ದರು.



