ಮುದಗಲ್; ಸಾರ್ವಜನಿಕರಿಂದ ರಸ್ತೆ ದುರಸ್ತಿ ಕಾರ್ಯ

ಹನುಮಂತ ನಾಯಕ ಸಂಪಾದಕರು -9739109997
ಮುದಗಲ್: ಪಟ್ಟಣದ ಲಿಂಗಸ್ಗೂರು ಹೆದ್ದಾರಿಯ ನೀರುಪಾಧಿಶ್ವರ ಪೆಟ್ರೋಲ್ ಬಂಕ್ ಹತ್ತಿರ ರಸ್ತೆಯನ್ನು ಸ್ಥಳೀಯ ಸಾರ್ವಜನಿಕರ ದುರಸ್ತಿ ಮಾಡಿಸಿದ್ದಾರೆ. ಮುದಗಲ್ ನಿಂದ ಲಿಂಗಸ್ಗೂರು ಹೊರಡುವ ರಸ್ತೆ ತುಂಬಾ ಅಲ್ಲಿ ಇಲ್ಲಿ ತೆಗ್ಗು ಗುಂಡಿ ಬಿದ್ದಿದ್ದರಿಂದ ಅನೇಕ ಅಪಘಾತಗಳು ಸಂಭವಿಸುತ್ತಿದ್ದು. ಇತ್ತೀಚೆಗೆ ಅಧಿಕಾರಿಗಳು ಕಳಪೆ ಮಟ್ಟದಿಂದ ಡಾಂಬರಿಕರಣ ಮಾಡದ ಕಾರಣ ತೆಗ್ಗು -ಗುಂಡಿಗಳು ಬಿದ್ದು ಅನೇಕ ಅಪಘಾತಗಳು ಆಗುತ್ತಿವೆ. ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಹಾಳಾಗಿತ್ತು.ಮರು ಡಾಂಬರೀಕರಣ ಮಾಡುವಂತೆ ಅನೇಕ ಬಾರಿ ಒತ್ತಾಯಿಸಿದರು ಪ್ರಯೋಜನವಾಗದ ಕಾರಣ. ಹೀಗಾಗಿ ಇಲ್ಲಿನ ಕೆಲವು ಕ್ರಿಯಾಶೀಲ ಸಾರ್ವಜನಿಕರು ತಾವೇ ರಸ್ತೆಯ ದುರಸ್ತಿ ಕಾರ್ಯಕ್ಕೆ ಮುಂದಾದರು. ಸಾರ್ವಜನಿಕರಿಂದ ರವಿವಾರ ಬೆಳಗ್ಗೆ ಡಾಂಬರ್ ಸಂಗ್ರಹಿಸಿ ಕಾಮಗಾರಿ ಕೈಗೊಂಡರು. ಬುಡ್ನೆಸಾಬ ನೇತೃತ್ವದಲ್ಲಿ ಈ ಕಾರ್ಯ ನೆಡೆಯುತು ಈ ವೇಳೆ ಡಾ. ಅಮರಗುಂಡಪ್ಪ
ಎಲ್ ಟಿ ನಾಯ್ಕ್, ಶಿವಕುಮಾರ್, ರಾಜು ಮಾಲಿಪಾಟೀಲ, ಮಲ್ಲಿಕಾರ್ಜುನ, ಆರೋಗಪ್ಪ ಸೇರಿದಂತೆ ಇನ್ನಿತರರು ಇದ್ದರು.