ಮುದಗಲ್ ಕಳ್ಳರ ಬಂಧನ ; ಆರೋಪಿಗಳಿಂದ 10 ಗ್ರಾಂ ಚಿನ್ನ ಹಾಗೂ ಎರಡು ಲಕ್ಷ ಹಣ ವಶಕ್ಕೆ ಪಡೆದ ಪೊಲೀಸರು

ಹನುಮಂತ ನಾಯಕ ಸಂಪಾದಕರು
ಮುದಗಲ್ : ಇತ್ತೀಚೆಗೆ ನಡೆದಿದ್ದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳ್ಳನನ್ನು ಬಂಧಿಸಿ, ಆತನಿಂದ 2 ಲಕ್ಷ ಹಣ ಹಾಗೂ 10 ಗ್ರಾಂ ಚಿನ್ನದ ಆಭರಣಗಳನ್ನ ಮರುವಶಪಡಿಸಿಕೊಳ್ಳುವಲ್ಲಿ ಸ್ಥಳೀಯ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಪಿಎಸ್ಐ ವೆಂಕಟೇಶ 11-02-25 ರಂದು ನಾಗರಹಾಳ ಗ್ರಾಮದಲ್ಲಿ ಶಂಕ್ರಮ್ಮ ಗಂ ಶಿವುಪುತ್ರಪ್ಪ ಹಾಗೂ 27-04-25 ರಂದು ರಂದು ಅಶೋಕ್ ತಂದೆ ವೀರುಪಾಕ್ಷಪ್ಪ ನಾಗರಾಳ ಎನ್ನುವವರ ಮನೆ ಕಳ್ಳತನಾಗಿದ್ದು ಇವರ ಪ್ರಕರಣ ದಾಖಲಾಗಿದ್ದು. ಈ ಪ್ರಕರಣಗಳ ಪತ್ತೆ ಕುರಿತು ರಾಯಚೂರು ಜಿಲ್ಲಾ ಎಸ್ಪಿ ಪುಟ್ಟಮಾದಯ್ಯ, ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಕುಮಾರಸ್ವಾಮಿ, ಹೆಚ್ಚುವರಿ ಅಧೀಕ್ಷಕರಾದ ಜಿ.ಹರೀಶ್ ಲಿಂಗಸ್ಗೂರು ಡಿವೈಎಸ್ ಅವರ ನೇತೃತ್ವದಲ್ಲಿ ಸ್ಥಳೀಯ ಪಿಎಸ್ಐ ವೆಂಕಟೇಶ ಸಿಬ್ಬಂದಿಗಳಾದ ವೆಂಕಟೇಶ ಎಚ್, ಅಮರೇಶ ಎಚ್ ಕೆ, ಹನುಮಂತ, ಅನೀಲ್ ಕುಮಾರ್ ಇವರನ್ನೊಳಗೊಂಡವಿಶೇಷ ತಂಡ ರಚಿಸಲಾಗಿತ್ತು. ಈ ವಿಶೇಷ ತಂಡದಿಂದ ಆರೋಪಿ ಶಿವಪ್ಪ ಶೇಖರಪ್ಪ ನಾಗರಾಹಾಳ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಒಟ್ಟು ಅಂದಾಜು 3 ಲಕ್ಷ ವಶ ಪಡಿಸಿಕೊಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳು ಇದ್ದರು.