Uncategorized

ಮಹಿಳೆಯರ ಮುಟ್ಟು ಶಾಪವಲ್ಲ ಪ್ರಕೃತಿ ನೀಡಿದ ವರದಾನ: ಶರಣಮ್ಮ ಕಾರನೂರು

ಹನುಮಂತ ನಾಯಕ ಸಂಪಾದಕ.         9739109997

ರಾಯಚೂರು; ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಹಾಗೂ ನವೋದಯ ಶಿಕ್ಷಣ ಮಹಾವಿದ್ಯಾಲಯ ರಾಯಚೂರು ಇವರ ಸಹಯೋಗದಲ್ಲಿ
ದಿನಾಂಕ 29.05.2026 ರಂದು ನವೋದಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ “ಮೇ-28 ಮುಟ್ಟಿನ ನೈರ್ಮಲ್ಯ ದಿನ” ಜಾಗೃತಿ ಕಾರ್ಯಕ್ರಮ ಕುರಿತು ಮುಟ್ಟು ಮಹಿಳೆಯರಿಗೆ ಪ್ರಕೃತಿ ನೀಡಿದ ವರದಾನ ವೈಜ್ಞಾನಿಕ ಮನೋಭಾವದಿಂದ ಎಲ್ಲರೂ ಈ ವಿಷಯವನ್ನು ಅರ್ಥಮಾಡಿಕೊಳ್ಳಬೇಕು ಎಂದರು ಮಕ್ಕಳಿಗೆ ಈ ಕುರಿತು ಮಾರ್ಗದರ್ಶನವನ್ನು ನೀಡಬೇಕು ಯಾವುದೇ ರೀತಿಯ ಮೂಢನಂಬಿಕೆಗೆ ಒಳಗಾಗಬಾರದೆಂದು ಕಾರ್ಯಕ್ರಮ ಉದ್ಘಾಟಸಿ ಶರಣಮ್ಮ ಕಾರನೂರು ಉಪನಿರ್ದೇಶಕರು ಮಹಿಳಾ ಮತು ್ತಮಕ್ಕಳ ಅಭಿವೃದ್ಧಿಇಲಾಖೆ ರಾಯಚೂರು ಇವರು ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು.
ವಿಶ್ವ ಮುಟ್ಟಿನ ನೈರ್ಮಲ್ಯ ದಿನಾಚರಣೆಯನ್ನು ಪ್ರತಿ ವರ್ಷ ಮೇ 28 ರಂದು ಆಚರಿಸಲಾಗುತ್ತಿದ್ದು, ಈ ಕುರಿತು ಎಲ್ಲರಲ್ಲೂ ಜಾಗೃತಿ ಅತ್ಯವಶ್ಯ. ಮುಟ್ಟಿನ ಸಮಯದಲ್ಲಿ ಪ್ರಕೃತಿಗೆ ಹಾನಿಯಾಗುವಂತಹ ಹಾಗೂ ನಮ್ಮ ದೇಹಕ್ಕೆ ಹಾನಿಕಾರಕವಾಗುವಂತಹ ಪ್ಯಾಡಗಳನ್ನು ಬಳಸಬಾರದು ಯಾವುದೇ ಸಮಸ್ಯೆ ಕಂಡುಬAದಲ್ಲಿ ವೈದ್ಯರನ್ನು ಸಂಪರ್ಕಿಸಿ Menstrual Cup ನ್ನು ಬಳಸಬೇಕೆಂದು . ಡಾ.ನಂದಿತಾ ಎಂ.ಎನ್ಜಿಲ್ಲಾಆರ್.ಸಿ. ಹೆಚ್.ಅಧಿಕಾರಿಗಳು “ಮೇ-28 ಮುಟ್ಟಿನ ನೈರ್ಮಲ್ಯ ದಿನ” ಜಾಗೃತಿ ಕಾರ್ಯಕ್ರಮ ಕುರಿತು ಉಪನ್ಯಾಸ ಭಾಷಣ ಮಾಡಿದರು.
ಮುಟ್ಟಿನ ಶುಭ್ರ ದಿನವನ್ನಾಗಿ ಆಚರಿಸಲಾಗುತ್ತಿದೆ ಪ್ರಕೃತಿ ನೀಡಿದ ಈ ದೈಹಿಕ ಬದಲಾವಣೆಯನ್ನು ನಾವೆಲ್ಲರೂ ಗೌರದಿಂದ ಕಾಣಬೇಕಾಗಿದೆ ಎಂದರು.ಹದಿಹರೆಯದ ಮಕ್ಕಳಲ್ಲಿ ಈ ಕುರಿತು ಜಾಗೃತಿ ಅತ್ಯವಶ್ಯಕ ಆದ್ದರಿಂದ ಪ್ರಶಿಕ್ಷಣಾರ್ಥಿಗಳಾದ ತಾವುಗಳು ಈ ಕುರಿತುಅಧ್ಯನಯ ಮಾಡಿ ಮಕ್ಕಳಿಗೆ ಈ ವಿಷಯದ ಕುರಿತು ಪಾಠಮಾಡಿ ಎಂದು ತಿಳಿಸಿದರು.
ನಿಯಮಿತವಾದ ಪೌಷ್ಠಿಕ ಆಹಾರ ಸೇವನೆ, ವ್ಯಾಯಾಮ ಶುವಿತ್ವವಾದ ಶೌಚಾಲಯಗಳ ಬಳಕೆ ಅತ್ಯವಶ್ಯಕ ಎಂದರು. ಮಹಿಳೆಯರು ಮುಟ್ಟಿನಿಂದಾಗುವ ತೊಂದರೆಗಳ ಕುರಿತು ಮುಕ್ತವಾಗಿ ಮಾತನಾಡುವುದನ್ನು ಕಲಿಯಬೇಕು ಅವಶ್ಯವಿದ್ದಲ್ಲಿ ವೈದ್ಯರನ್ನು ಸಂಪರ್ಕಮಾಡಬೇಕು ಎಂದು ಡಾ: ಶ್ರೀ ಮತಿ ಗಿರಿಜಾ ಜಂಡರ್ ತಜ್ಞರು ಸಲಹೆ ನೀಡಿದರು.
ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಪುರುಷ ಉಪನ್ಯಾಸಕರು ಭಾಗವಹಿಸಿ ಈ ಕುರಿತು ಚರ್ಚಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಉಮಾಕಾಂತಜಿ. ದೇವರಮನಿ,ವಹಿಸಿದ್ದರು.ಡಾ.ರಾಜಾಶಂಕರಎನ್. ಆಡಳಿತ ಸಂಯೋಜಕರು, ಡಾ.ರತನ್ ಚವ್ಹಾನ್ ಶೈಕ್ಷಣಿಕ ಸಂಯೋಜಕರು, ಡಾ.ವಿಜಯಕುಮಾರಿ ಅಧ್ಯಕ್ಷರು, ಆಂತರಿಕ ದೂರು ಸಮಿತಿ, ಹಾಗೂ ನವೋದಯಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ ಆರ್..ಕೆ.ಎಸ್.ಕೆ ಜಿಲ್ಲಾ ಸಂಯೋಜಕರು, ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಶ್ರೀಮತಿವಿಜಯಲಕ್ಷ್ಮಿ ನವೂದಯ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

Hanumanth Nayaka

ಹನುಮಂತ ನಾಯಕ ಮಟ್ಟೂರಿನ ಸಾಂಸ್ಕೃತಿಕ ಪರಂಪರೆ ಮತ್ತು ಸಮಾಜಮುಖಿ ಚಟುವಟಿಕೆಗಳಿಗೆ ಶಕ್ತಿ ತುಂಬುತ್ತಿರುವ ಪ್ರಮುಖ ವ್ಯಕ್ತಿಗಳಲ್ಲೊಬ್ಬರಾದ ಹನುಮಂತ ನಾಯಕರು, “ಕಲ್ಯಾಣ ವೈಭವ” ಪತ್ರಿಕೆಯ ಗೌರವಾನ್ವಿತ ಸಂಪಾದಕರಾಗಿದ್ದಾರೆ. ಸಮೂಹ ಸೇವೆ, ಮಾಹಿತಿ ಹಂಚಿಕೆ ಮತ್ತು ಗ್ರಾಮೀಣ ಅಭ್ಯುದಯದ ಬಗ್ಗೆ ಅವರಿಗಿರುವ ಗಾಢ ಬದ್ಧತೆ ಅವರಿಗೆ ವಿಶಿಷ್ಟ ಗುರುತನ್ನು ತಂದಿದೆ. ಸಮಾಜದ ಪ್ರತಿಯೊಂದು ಮುಖ್ಯ ಕ್ಷಣ—ಮದುವೆ ಸಮಾರಂಭಗಳು, ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭಾವಂತರ ಸಾಧನೆಗಳು ಮತ್ತು ಗ್ರಾಮಾಭಿವೃದ್ಧಿ ಚಟುವಟಿಕೆಗಳನ್ನು ನಿಖರವಾಗಿ ದಾಖಲಿಸಿ ಜನತೆಗೆ ತಲುಪಿಸುವುದು ಅವರ ಮುಖ್ಯ ಧ್ಯೇಯ. ಅವರ ಸಂಪಾದಕೀಯ ಶೈಲಿ ಸ್ಪಷ್ಟ, ಜವಾಬ್ದಾರಿಯುತ ಮತ್ತು ಓದುಗರನ್ನು ಜತೆಗೇ ಸಾಗಿಸುವಂತಿದೆ. ಮಟ್ಟೂರು ಪ್ರದೇಶದಲ್ಲಿ ನಂಬಿಕೆ, ನಿಷ್ಠೆ ಮತ್ತು ಸೇವಾಭಾವನೆಗೆ ಪ್ರತೀಕವಾಗಿ ಗುರುತಿಸಿಕೊಂಡಿರುವ ಹನುಮಂತ ನಾಯಕರವರು, ತಮ್ಮ ಮಾಧ್ಯಮದ ಮೂಲಕ ಸಮಾಜದ ಒಗ್ಗಟ್ಟು, ಸಂಸ್ಕೃತಿ ಸಂರಕ್ಷಣೆ ಮತ್ತು ಜನಜಾಗೃತಿ ಮೂಡಿಸುವ ಪ್ರಯತ್ನಗಳಲ್ಲಿ ಸದಾ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಗ್ರಾಮದ ಅಭಿವೃದ್ದಿಗಾಗಿ ತಮ್ಮ ಜ್ಞಾನ, ಸಮಯ ಮತ್ತು ಶ್ರಮವನ್ನು ವಿನಯದಿಂದ ಹೂಡುತ್ತಿರುವ ಅವರ ಕೆಲಸವು ಮಟ್ಟುರು ಸಮುದಾಯಕ್ಕೆ ಅಮೂಲ್ಯ ಕೊಡುಗೆಯಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!