Uncategorized
ಮುದಗಲ್: ಮೃತರ ಮನೆಗೆ ಬಯ್ಯಾಪುರ ಭೇಟಿ

ಹನುಮಂತ ನಾಯಕ ಸಂಪಾದಕರು -9739109997
ಮುದಗಲ್: ಬುಧವಾರ ಸಂಜೆ ಮರವೊಂದು ಬುಡಸಮೇತ ಕಿತ್ತು ಬೈಕ್ ಮೇಲೆ ಬಿದ್ದು, ಗಂಡ ಹಾಗೂ ಹೆಂಡತಿ ಸಾವನ್ನಪ್ಪಿದ ಹಿನ್ನಲೆಯಲ್ಲಿ. ಇಂದು ನಾಗಲಾಪುರ ಗ್ರಾಮದ ಮೃತರ ಮನೆಗೆ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಭೇಟಿ ನೀಡಿ, ಮೃತ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಮೃತಪಟ್ಟ ಮನೆಗೆ ತೆರಳಿ ಅಲ್ಲಿನ ಸಂಬಂಧಿಕರಗೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದರು. ನಿಮ್ಮ ದಾಖಲೆಗಳನ್ನು ಕೊಡಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಏನಾದ್ರೂ ಅನುಕೂಲ ಮಾಡಿಕೊಡುವೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ರಾಮನಗೌಡ, ತಿಮ್ಮನಗೌಡ, ಶರಣಪ್ಪ ಸೇರಿದಂತೆ ಇನ್ನಿತರರು ಇದ್ದರು.