Uncategorized

ಮುದಗಲ್: ಬೈಕ್ ಮೇಲೆ ಬೃಹತ್ ಮರ ಬಿದ್ದು ಗಂಡ -ಹೆಂಡತಿ ಸಾವು

ಹನುಮಂತ ನಾಯಕ ಸಂಪಾದಕರು -9739109997

ಮುದಗಲ್: ಜಿಟಿ ಜಿಟಿ ಮಳೆ ಮುಂದುವರಿದಿದ್ದು. ಇದರ ನಡುವೆ, ಇಂದು ಸಂಜೆ ಮುದಗಲ್ ನಲ್ಲಿ ಮರವೊಂದು ಬುಡಸಮೇತ ಕಿತ್ತು ಬೈಕ್ ಮೇಲೆ ಬಿದ್ದು, ಗಂಡ ಹಾಗೂ ಹೆಂಡತಿ  ಸಾವನ್ನಪ್ಪಿದ ಘಟನೆ ಸಂಭವಿಸಿತು. ನಾಗಲಾಪುರ ಗ್ರಾಮದ ರಮೇಶ್ ಗುಡದಪ್ಪ (25) ಹಾಗೂ ಅನುಸೂಯ ರಮೇಶ್ (22) ಎಂಬವರು ಮೃತಪಟ್ಟಿದ್ದಾರೆ. ಮುದಗಲ್ ಪಟ್ಟಣದಿಂದ ಗಂಡ ಹೆಂಡತಿ ಹಾಗೂ ಮಗಳು ನಾಗಲಾಪೂರು ಗ್ರಾಮಕ್ಕೆ ಹೋಗುವ ಸಂದರ್ಭದಲ್ಲಿಮಸ್ಕಿ ಕ್ರಾಸ್ ಬಳಿ ಬೃಹತ್ ಮರ ಬಿದ್ದಿದ್ದರಿಂದ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದರೆ ಅವರ ಮಗಳಾದ ಸೌಜನ್ಯ ರಮೇಶ (0 3) ಸಣ್ಣ ಪುಟ್ಟ ಗಾಯಗಳಾಗಿವೆ ಸ್ಥಳಕ್ಕೆ ಮುದಗಲ್ ಪೊಲೀಸ್ ಠಾಣೆ ಪಿಎಸ್ಐ ವೆಂಕಟೇಶ್ ಮಾಡಿಗೇರಿ ಭೇಟಿ ನೀಡಿ ಪರಿಶೀಲಿನ ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಮೃತರ ಶವಗಳನ್ನು ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button