ಲಿಂಗಸುಗೂರ: ತಂದೆಯೆ ಅಪ್ರಾಪ್ತ ಮಗಳಮೇಲೆ ಲೈಂಗಿಕ ಕಿರುಕುಳ ಪೋಕ್ಸೋ ಪ್ರಕರಣ ಇಬ್ಬರು ಆರೋಪಿಗಳ ಬಂಧನ

ಹನುಮಂತ ನಾಯಕ. 9739109997
ಲಿಂಗಸುಗೂರ:ಪಟ್ಟಣದ ವಾರ್ಡ್ ನಂ. ೪ ರ (ಜನತಾ ಕಲೋನಿ) ಯ ನಿವಾಸಿ ಅಮರೇಶ್ ಈತನು ತನ್ನ ಮಗಳು ೭ ನೇ ತರಗತಿ ಓದುತ್ತಿದ್ದಾಗ ಋತುಮತಿಯಾಗಿದ್ದು, ಆಕೆಯು ಮನೆಯಲಿ ಒಬ್ಬಳೆ ಇದ್ದಾಗ ತಂದೆ ಅಮರೇಶ್ ಮೈ ಕೈ ಮುಟ್ಟಿ ಕೆಟ್ಟದಾಗಿ ವರ್ತನೆ ಮಾಡುತ್ತಿದ್ದು ಮತ್ತು ಈ ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಸುತ್ತಿದ್ದು. ನಂತರ ಬಾಲಕಿ ೯ ನೇ ತರಗತಿ ಓದುತ್ತಿದ್ದಾಗ ಅಮರೇಶ್ ಈತನು ತನ್ನ ಮನೆಯಲ್ಲಿ ಮಗಳಿಗೆ ಒಂದು ಸಲ ಮೈ, ಕೈ ಮುಟ್ಟಿ ಆಕೆಯೊಂದಿಗೆ ಬಲವಂತವಾಗಿ ಅತ್ಯಾಚಾರ ಮಾಡಿದ್ದಲದೇ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನ ತಾಯಿಗೂ ಟಾರ್ಚರ್ ಮಾಡ್ತೀನಿ, ನಿನ್ನನ್ನು ಸಾಯಿಸ್ತಿನಿ ಅಂತಾ ಬೆದರಿಸಿದ್ದು, ಆಗಿನಿಂದಲು ನಿರಂತರವಾಗಿ ಮನೆಯಲ್ಲಿ ಒಬ್ಬಳೆ ಇದ್ದಾಗ ಬಲವಂತವಾಗಿ ಅತ್ಯಾಚಾರ ಮಾಡುತ್ತಾ ಬಂದಿರುತ್ತಾನೆ.
ಅಲ್ಲದೇ ಕಳೆದ ವರ್ಷ ಆರೋಪಿ ಅಮರೇಶ್ ಈತನ ಸ್ನೇಹಿತನಾದ ಆರೋಪಿ ಸೀನು ಎರಡು ಸಲ ಮನೆಗೆ ಕರೆದುಕೊಂಡು ಬಂದು ಆತನೊಂದಿಗೆ ಮಲಗಬೇಕು ಎಂದು ಬೆದರಿಸಿದ್ದು, ಆರೋಪಿ ಸೀನು ಬಾಲಕಿಯೊಂದಿಗೆ ಎರಡು ಸಲ ಬಲವಂತವಾಗಿ ಅತ್ಯಾಚಾರ ಮಾಡಿರುತ್ತಾನೆ ನಂತರ ಫೆಬ್ರುವರಿ ತಿಂಗಳಲ್ಲಿ ಆರೋಪಿ ಅಮರೇಶ್ ಬಾಲಕಿಯೊಂದಿಗೆ ದೈಹಿಕ ಅತ್ಯಾಚಾರ ಮಾಡಲು ಪ್ರಾರಂಭಿಸಿದ್ದು.
ದಿನಾಂಕ ೧೬.೦೪.೨೦೨೬ ರಂದು ಸಂಜೆ ೫.೦೦ ಗಂಟೆ ಸುಮಾರಿಗೆ ಮನೆಯಲ್ಲಿ ಯಾರು ಇಲ್ಲದೇ ಇರುವುದನ್ನು ನೋಡಿ ಬಾಲಕಿಯೊಂದಿಗೆ ಬಲವಂತವಾಗಿ ಅತ್ಯಾಚಾರ ಮಾಡಿದು, ಆರೋಪಿ ಸೀನು ಬಾಲಕಿಯು ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತ ವಯಸ್ಸಿನವಳೆಂದು ತಿಳಿದಿದ್ದು ಬಾಲಕಿಯೊಂದಿಗೆ ಬಲವಂತವಾಗಿ ಅತ್ಯಾಚಾರ ಮಾಡಿದ್ದೂ ಈ ವಿಷಯ ತಾಯಿಯ ಬಳಿ ತಿಳಿಸಿದ್ದು ಬಾಲಕಿಯ ತಾಯಿಯು ತನ್ನ ಮಗಳ ಭವಿಷ್ಯದ ದೃಷ್ಟಿಯಿಂದ ಭಯಗೊಂಡು ಮನೆಯಲ್ಲಿ ಹಿರಿಯರ ಜೊತೆ ಮಾತನಾಡಿ ವಿಚಾರ ಮಾಡಿಕೊಂಡು ತಡವಾಗಿ ದಿನಾಂಕ ೧೨-೦೫-೨೦೨೬ರಂದು ದೂರು ನೀಡಿರುತ್ತಾರೆ
ದೂರಿನ ಆದರದ ಮೇಲೆ ಲಿಂಗಸುಗೂರ ಸಿಪಿಐ ಹೊಸಕೇರಪ್ಪ ಇಬ್ಬರು ಆರೋಪಿಗಳನ್ನು ಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಿ ನ್ಯಾಯಾಲಯದ ಬಂಧನಕ್ಕೆ ನೀಡಿದ್ದಾರೆಂದು ತಿಳಿದು ಬಂದಿದೆ.



