ಇಂಡಸ್ಟ್ರೀಯಲ್ ಟ್ರಿಬುನಲ್ ಅವಾರ್ಡ್ ಉಲ್ಲಂಘನೆ ಆರೋಪ ಜೂನ್ 2ಕ್ಕೆ ಆಹೋರಾತ್ರಿ ಧರಣಿ; ಜಯಶ್ರೀ

ಹನುಮಂತ ನಾಯಕ ಸಂಪಾದಕ 9739109997
ರಾಯಚೂರು: ಇಂಡಸ್ಟ್ರೀಯಲ್ ಟ್ರಿಬುನಲ್ ಅವಾರ್ಡ್ ಜಾರಿಗೊಳಿಸದೇ ಹಾಗೂ ಕರ್ನಾಟಕ ಹೈಕೋರ್ಟ್ನಲ್ಲಿ ಪ್ರಕರಣ ಬಾಕಿ ಇದ್ದರೂ ಹೆಗ್ಗಸನಹಳ್ಳಿ ಗ್ರಾಮದ ಸರ್ಕಾರದ ಜಾಗದಲ್ಲಿ ಐಜಿ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಸಂಸ್ಥೆ ಕಾರ್ಯಾರಂಭಕ್ಕೆ ಮುಂದಾ ಗಿರುವುದನ್ನು ಖಂಡಿಸಿ ದಲಿತ ಸೇನೆ ಜಿಲ್ಲಾ ಸಮಿತಿ ಜೂನ್ 2ರಂದು ಕಾರ್ಖಾನೆಯ ಗೇಟ್ ಎದುರು ಆಹೋರಾತ್ರಿ ಧರಣಿ ಹಮ್ಮಿಕೊಳ್ಳ ಲು ತೀರ್ಮಾನಿಸಿದೆ ಎಂದು ದಲಿತ ಸೇನೆಯ ಮಹಿಳಾ ಜಿಲ್ಲಾಧ್ಯಕ್ಷೆ ಜಯಶ್ರೀ ಅವರು ತಿಳಿಸಿದ್ದಾರೆ.
ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಿಗೆ ದಲಿತ ಸೇನೆ ಜಿಲ್ಲಾಧ್ಯಕ್ಷ ಮಾರುತಿ ಚಿಕ್ಕಸೂಗೂರು ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಗಿದ್ದು, ಅದರ – KIADB, KSSIDC, – KSPCB, ಕೈಗಾರಿಕಾ ಸುರಕ್ಷತೆ ಮತ್ತು – ಆರೋಗ್ಯ ಇಲಾಖೆ, ಕೈಗಾರಿಕಾ – ಮತ್ತು ವಾಣಿಜ್ಯ ಇಲಾಖೆ, ಪಟ್ಟಣ – ಯೋಜನಾ ಇಲಾಖೆ, ಪೌರಾಡಳಿತ ಇಲಾಖೆ, ಜೆಸ್ಕಾಂ, ಅಗ್ನಿಶಾಮಕ – ಇಲಾಖೆ, ಜಲ ಸಂಪನ್ಮೂಲ ಇಲಾಖೆ ಹಾಗೂ ಗ್ರಾಮೀಣ ಪೊಲೀಸ್ ಠಾಣೆಗೆ ರವಾನಿಸಲಾಗಿದೆ. ಈ
ಮನವಿಯಲ್ಲಿ, ರಾಯಚೂರು ತಾಲೂಕಿನ ಹೆಗ್ಗಸನಹಳ್ಳಿ ಗ್ರಾಮದ ಸುಮಾರು 108 ಎಕರೆ ಸರ್ಕಾರದ ಜಾಗದಲ್ಲಿ ಈ ಹಿಂದೆ ಮೈಸೂರು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಸಂಸ್ಥೆ ಕಾರ್ಯನಿರ್ವಹಿಸುತ್ತಿತ್ತು. ಆದರೆ 2013ರ ಜುಲೈ 16ರಂದು ಏಕಾಏಕಿ ಕಾರ್ಖಾನೆಯನ್ನು ಸ್ಥಗಿತ ಗೊಳಿಸಿ ಅನೇಕ ಕಾರ್ಮಿಕರನ್ನು ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ದೂಡಲಾಗಿತ್ತು ಎಂದು ಆರೋಪಿ ಸಲಾಗಿದೆ. ಇಂಡಸ್ಟ್ರೀಯಲ್ ಟ್ರಿಬುನಲ್ ಹುಬ್ಬಳ್ಳಿ ನಲ್ಲಿ ನಡೆದ
ಐಡಿ ನಂ.25/2014 ಪ್ರಕರಣದಲ್ಲಿ 2024ರ ಫೆಬ್ರವರಿ 5ರಂದು ಕಾರ್ಮಿಕರ ಪರವಾಗಿ ಅವಾರ್ಡ್ ಹೊರಬಿದ್ದಿದ್ದು, ಕಾರ್ಮಿಕರಿಗೆ ಬಾಕಿ ವೇತನ ಮತ್ತು ಕಾನೂನುಬದ ಸೌಲಭ್ಯಗಳನ್ನು ಪಾವತಿಸುವಂತೆ ಆದೇಶಿಸಲಾಗಿದೆ. ಆದರೂ ಇದುವರೆಗೆ ಕಾರ್ಮಿಕರಿಗೆ
ಸಂಪೂರ್ಣ ಪಾವತಿ ಮಾಡಿಲ್ಲ. ಜೊತೆಗೆ ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠದಲ್ಲೂ ಪ್ರಕರಣ ಬಾಕಿ ಇದ್ದು ಅಂತಿಮ ತೀರ್ಪು ಹೊರಬಂದಿಲ್ಲ ಎಂದು ತಿಳಿಸಲಾಗಿದೆ.
ಮೈಸೂರು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಮತ್ತು ಐಜಿ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಸಂಸ್ಥೆಗಳ ಮಾಲೀಕರು ಒಬ್ಬರೇ ಎಂಬ ಮಾಹಿತಿ ಲಭ್ಯವಾಗಿದ್ದು, ಕಂಪನಿಯ ಹೆಸರನ್ನು ಬದಲಾಯಿಸಿ ಮತ್ತೆ ಕಾರ್ಯಾರಂಭ ಮಾಡಲು ಯತ್ನಿಸು ತ್ತಿ ದ್ದಾರೆ ಎಂಬ ಗಂಭೀರ ಅನುಮಾನ ವ್ಯಕ್ತವಾಗಿದೆ ಎಂದು ದೂರಲಾಗಿದೆ.
ಇದಲ್ಲದೆ, ಸುಮಾರು 500 ಎಕರೆ ಕೃಷಿ ಜಮೀನನ್ನು ಸ್ಥಳೀಯ ರೈತರಿಂದ ಲೀಸ್ ಪಡೆದು ಹುಲ್ಲು ಬೆಳೆಯಲಾಗುತ್ತಿದ್ದು, ಅದನ್ನು ಸಂಸ್ಕರಿಸಿ ಬಯೋಕೆಮಿಕಲ್ ಉತ್ಪಾದನೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ಪರಿಸರ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಆತಂಕ ವ್ಯಕ್ತವಾಗಿದೆ ಎಂದು ಸಂಘಟನೆ ಹೇಳಿದೆ.
ಬಯೋಕೆಮಿಕಲ್ ಹಾಗೂ ಕೈಗಾರಿಕಾ ಘಟಕ ಸ್ಥಾಪನೆಗೆ KIADB, KSPCB, ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ಇಲಾಖೆ, ಪಟ್ಟಣ ಯೋಜನಾ ಇಲಾಖೆ, ಅಗ್ನಿಶಾಮಕ ಇಲಾಖೆ, ಜಲ ಸಂಪನ್ಮೂಲ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಂತಿಮ ಅನುಮತಿ ಕಡ್ಡಾಯವಾಗಿದೆ. ಆದರೆ ಸೂಕ್ತ ಕಾರ್ಯಚಟುವಟಿಕೆ ಆರಂಭಿಸಿರುವ ಮಾಹಿತಿ ಲಭ್ಯವಾಗಿದೆ ಎಂದು ಆರೋಪಿಸಲಾಗಿದೆ.
ಕಾರ್ಮಿಕರಿಗೆ ಬಾಕಿ ವೇತನ ಹಾಗೂ ಕಾನೂನುಬದ್ದ ಸೌಲಭ್ಯ
ಜಾಗಗಳನ್ನು ತಕ್ಷಣ ಪಾವತಿಸಬೇಕು, ಹೈಕೋರ್ಟ್ ಅಂತಿಮ ತೀರ್ಪು ಬರುವವರೆಗೆ ಹೊಸ ಕಾರ್ಯಚಟು ವಟಿಕೆಗಳಿಗೆ ಅನುಮತಿ ನೀಡಬಾರದು, ಸರ್ಕಾರದ ಜಾಗ ಹಾಗೂ ಲೀಸ್ ಭೂಮಿಯ ಬಳಕೆಯ ಕುರಿತು ತನಿಖೆ ನಡೆಸಬೇಕು, ಸೂಕ್ತ ನಡೆಯುತ್ತಿರುವ ಚಟುವಟಿಕೆಗಳನ್ನು ತಕ್ಷಣ ನಿಲ್ಲಿಸಬೇಕು ಹಾಗೂ ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಕುರಿತು ತಜ್ಞ ಸಮಿತಿಯಿಂದ ಪರಿಶೀಲನೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಹೋರಾಟದಲ್ಲಿ ದಲಿತ ಶ್ರೇಣಿ ಸಂಘಟನೆಗಳ ಪದಾಧಿಕಾರಿ ಗಳು, ಮೈಸೂರು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಸಂಸ್ಥೆಯಲ್ಲಿ ಕೆಲಸ ಮಾಡಿದ್ದ ಸಿಬ್ಬಂದಿ ಹಾಗೂ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಜಯಶ್ರೀ ಅವರು ತಿಳಿಸಿದ್ದಾರೆ. ಈ
ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಂಘಟನೆಯ ಮುಖಂಡರು ಹಾಗೂ ವಿವಿಧ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಇದ್ದರು.



