Uncategorized
ಮುದಗಲ್: ಹೆಲ್ಮೆಟ್ ಧರಿಸಿ ಬೈಕ್ ಓಡಿಸುವಂತೆ ಭಮಸಾಗರ ಸ್ಕೂಲ್ ಮಕ್ಕಳಿಂದ ಜಾಗೃತಿ
ಹನುಮಂತ ನಾಯಕ ಸಂಪಾದಕರು. 9739109997
ಮುದಗಲ್: ಸ್ಥಳೀಯ ಎಸ್ ಬಿ ಭಮಸಾಗರ ಪಬ್ಲಿಕ್ ಶಾಲೆಯ ಮಕ್ಕಳಿಂದ ಅಪರಾಧ ತಡೆ ಮಾಸಾಚರಣೆ ಹಾಗೂ ರಸ್ತೆ ಸುರಕ್ಷತಾ ಸಪ್ತಾಹ ಜಾಗೃತಿ ನಡೆಯಿತು. ಮುದಗಲ್ – ಲಿಂಗಸ್ಗೂರು ರಸ್ತೆಯಲ್ಲಿ ಹೆಲ್ಮೆಟ್ ಇಲ್ಲದೇ ತೆರಳುತ್ತಿರುವವರನ್ನು ಶಾಲೆ ಮಕ್ಕಳು ಅಡ್ಡಗಟ್ಟಿ ನಿಂತುಕೊಂಡು ಸಾರ್ವಜನಿಕರಿಗೆ ಹಾಗೂ ಬೈಕ್ ಸವಾರರಿಗೆ ಹೆಲ್ಮೇಟ್ ಇಲ್ಲದೇ ಚಲಾಯಿಸಬೇಡಿ. ಹೆಲ್ಮೆಟ್ ಇಲ್ಲದೇ ಅಪಘಾತ ಸಂಭವಿಸಿದರೆ ಸಾವು ಸಂಭವಿಸುತ್ತದೆ. ಆದ್ದರಿಂದ
ಹೆಲ್ಮೆಟ್ ಧರಿಸಿ, ಸಣ್ಣ ಮಕ್ಕಳಿಗೆ ಬೈಕ್ಗಳನ್ನು ಕೊಡಬೇಡಿ, ಲೈಸೆನ್ಸ್ ಹಾಗೂ ಇನ್ಸೂರೆನ್ಸ್ ಇರಲಿ ಎಂದು ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಸ್ಥಳಿಯ ಠಾಣೆಯ ಪಿಎಸ್ಐ ವೆಂಕಟೇಶ್ ಮಾಡಗೇರಿ, ಸರ್ಕಾರಿ ಆಸ್ಪತ್ರೆಯ ವೈದ್ಯರಾದ ವಿನೋದ್ ಕುಮಾರ್, ಶಾಲೆಯ ಅಧ್ಯಕ್ಷ ಡಾ.ಎಸ್ ಬಿ ಭಮಸಾಗರ ಸೇರಿದಂತೆ ಶಾಲೆ ಶಿಕ್ಷಕರು ಮಕ್ಕಳು ಇದ್ದರು.



