Uncategorized

ಮುದಗಲ್ | ₹1.47 ಲಕ್ಷ ಮೌಲ್ಯದ ಬಂಗಾರ ಜಪ್ತಿ‌

ಹನುಮಂತ ನಾಯಕ ಸಂಪಾದಕ -9739109997

ಮುದಗಲ್: ಇತ್ತೀಚೆಗೆ ಪಟ್ಟಣ ಸಮೀಪದ ಪಿಕಳಿಹಾಳ ಗ್ರಾಮದಲ್ಲಿ ಅಮರೇಶ ಶೇಖರಪ್ಪ ಹಾಗೂ ಶಿವರಾಜ್ ಶಂಕರಪ್ಪ ಎಂಬುವವರ ಮನೆಯಲ್ಲಿ ಇಟ್ಟಿದ್ದ ₹1.47 ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ಎಗರಿಸಿ ಪರಾರಿಯಾಗಿದ್ದ ಮಲ್ಲೇಶ್ ಅಮಾತೆಪ್ಪ ಆರೋಪಿಯನ್ನು ಶುಕ್ರವಾರ ಬಂಧಿಸುವುದರ ಜತೆಗೆ ₹1.47ಲಕ್ಷ ಮೌಲ್ಯದ 30ಗ್ರಾಂ ಬಂಗಾರ, ಹಾಗೂ 60ಗ್ರಾಂ ಬೆಳ್ಳಿ ಚೈನಾ ವಸ್ತುಗಳನ್ನು ಮುದಗಲ್ ಠಾಣೆಯ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪಿಎಸ್ಐ ವೆಂಕಟೇಶ್ ಮಾಡಗೇರಿ, ಎಎಸ್ಐ ಮಲ್ಲಯ್ಯ ಸ್ವಾಮಿ, ಸಿಬ್ಬಂದಿಗಳಾದ ವೆಂಕಟೇಶ್, ಅಮರೇಶ ಎಚ್, ಸತ್ತಾರಪಾಶಾ, ರಾಮಪ್ಪ, ರಂಗಪ್ಪ ಸೇರಿದಂತೆ ಇನ್ನಿತರರು ಇದ್ದರು. ಈ ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾ ಎಸ್ಪಿ ಪುಟ್ಟ ಮಾದಯ್ಯರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button