ಸೋತರು ಸಂಘಟನೆ ಮುಂದಾದ ಹೂಲಗೇರಿ : ಜಿ, ನಾಯಕ

ಹನುಮಂತ ನಾಯಕ ಸಂಪಾದಕ. 9739109997
ಮುದಗಲ್ : ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋತಿರುವ ಡಿ, ಎಸ್, ಹೂಲಗೇರಿ ರವರು ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಸಂಘಟನೆ ಮುಂದಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ರಾಯಚೂರು ಯಾದಗಿರಿ ಲೋಕಸಭಾ ಸದಸ್ಯ ಜಿ, ಕುಮಾರ ನಾಯಕ ಹೇಳಿದರು.
ಮುದಗಲ್ ಪುರಸಭೆ ವ್ಯಾಪ್ತಿಯ ಪೈಗಂಬರ್ ನಗರದಿಂದ ಜಕ್ಕೇರುಮಡು ಗ್ರಾಮದವರೆಗೆ ಕೆ.ಕೆ.ಆರ್.ಡಿ.ಬಿ ಯ ಮ್ಯಾಕ್ರೋ ಯೋಜನೆ ಅಡಿಯಲ್ಲಿ ಪಿಡಬ್ಲ್ಯೂಡಿ ಅನುಷ್ಠಾನ ಇಲಾಖೆಗೆ ಸುಮಾರು 74.32 ಲಕ್ಷ ರೂಪಾಯಿ ಮೊತ್ತದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು ಹೂಲಗೇರಿ ರವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅಧ್ಯಕ್ಷರ ವಿವಿಧ ವಿವಿಧ ಘಟಕಗಳ ಅಧ್ಯಕ್ಷರ ಹಾಗೂ ಸರಕಾರದ ನಾಮನಿರ್ದೇಶನ ಮಾಡುವ ಮೂಲಕ ಸಂಘಟನೆ ಮಾಡುತ್ತಾ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ನೀಡಿವ ಮೂಲಕ ಗೆಲುವಿಗೆ ಶ್ರಮಿಸಿದ್ದಾರೆ
ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಎಸ್. ಹೂಲಗೇರಿ ಮಸ್ಕಿ ಶಾಸಕ ಬಸವನಗೌಡ ತುರುವಿಹಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರಗೌಡ ಗೌಡರ ಪುರಸಭೆ ಉಪಾಧ್ಯಕ್ಷ ಅಜ್ಮಿರ್ ಬೆಳ್ಳಿಕಟ್,ತಮ್ಮಣ್ಣ ಗುತ್ತೇದಾರ್, ಪುರಸಭೆ ಸದಸ್ಯ ಎಸ್, ಆರ್, ರಸೂಲ್, ಯುವ ಘಟಕ ಅಧ್ಯಕ್ಷ ಅಬ್ದುಲ್ ಖದೀರ್, ಕೆಡಿಪಿ ಸದಸ್ಯ ರಾಘವೇಂದ್ರ ಕುದರಿ ಹಿರಿಯ ಮುಖಂಡ ದಾವುದಸಾಬ, ಸೈಯದಸಾಬ , ಬಸವರಾಜ ಲೆಕ್ಕಿಹಾಳ,ಸೇರಿದಂತೆ ಕಾಂಗ್ರೆಸ್ ಪಕ್ಷ ಕಾರ್ಯಕರ್ತರು ಸಾರ್ವಜನಿಕರು ಇದ್ದರು



