Uncategorized
ಲಿಂಗಸ್ಗೂರು ತಾಲೂಕಿನಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ಸಾರಾಯಿ ಮಾರಾಟ ದಂಧೆ

ಹನುಮಂತ ನಾಯಕ ಸಂಪಾದಕ. 9739109997
*ಸಾರಾಯಿ ಮಾರಾಟ ದಂಧೆಯಲ್ಲಿ ಮಹಿಳೆ, ಮಕ್ಕಳು ಭಾಗಿ
* ಅವ್ಯಾಹತವಾಗಿ ನೆಡೆಯುವ ವ್ಯವಹಾರಕ್ಕೆ ಪೋಲಿಸರು ಕುಮ್ಮಕ್ಕು
*
* ಕುಡಿದು ಗ್ರಾಮದಲ್ಲಿ ಪ್ರತಿ ನಿತ್ಯ ಜಗಳ
ಲಿಂಗಸ್ಗೂರು :
ತಾಂಡಗಳಲ್ಲಿ ಕಳ್ಳಬಟ್ಟಿ ಮಾರಾಟ ನಿಗ್ರಹ ಮಾಡಲು ಸರಕಾರ ಸಾಕಷ್ಟು ಯೋಜನೆ ರೂಪಿಸುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಪ್ರತಿದಿನ (ಕುಗ್ರಾಮದಲ್ಲಿಯೂ) ಸಾವಿರಾರು ಬಾಟಲಿಗಳು ಮಾರಟ ಮಾಡುವುದು ಮಾತ್ರ ನಿಂತಿಲ್ಲ.
ಇದಕ್ಕೆ ಲಿಂಗಸ್ಗೂರು ತಾಲೂಕು ಸೇರಿದಂತೆ ಮುದಗಲ್ ಸುತ್ತಲಿನ ಗ್ರಾಮಗಳೇ ಸಾಕ್ಷಿ ಗ್ರಾಮಗಳಲ್ಲಿ ಮದ್ಯದ ಬಾಟಲಿಗಳು ಕಿರಾಣಿ ಅಂಗಡಿ, ಹೊಟೇಲ್, ಕೆಲ ಸಂಸಾರಸ್ಥರ ಮನೆಗಳಲ್ಲಿಯೂ ಬಾಟಲಿಗಳು ಮಾರಾಟವಾಗುತ್ತಿವೆ ಎಂದರೆ ಆಶ್ಚರ್ಯಪಡಬೇಕಾಗಿಲ್ಲ. ಇನ್ನೂ ಆಘಾತಕಾರಿ ವಿಷಯವೆಂದರೆ ಸಾರಾಯಿ ಬಾಟಲಿ ಮಾರಾಟ ದಂದೆ ಯಲ್ಲಿ ಮಹಿಳೆಯರು ಹಾಗೂ ಚಿಕ್ಕ ಮಕ್ಕಳು ಬಾಗಿಯಾಗಿರುವುದು. ಲಿಂಗಸ್ಗೂರು ತಾಲೂಕಿನ ಕಸಬಾ ಲಿಂಗಸ್ಗೂರು ಸೇರಿದಂತೆ ಇನ್ನಿತರ ಹಳ್ಳಿಗಳಲ್ಲಿ ಮುದಗಲ್ ಭಾಗದ ಆಮದಿಹಾಳ, ನಾಗಲಾಪುರ, ಛತ್ತರ್, ಮಟ್ಟೂರು, ಮಿಟ್ಟಿಕೆಲ್ಲೂರು, ಗುಡಿಹಾಳ, ಮಟ್ಟೂರು ತಾಂಡ, ಕಾಚಾಪೂರ, ಬುದ್ದಿನ್ನಿ ಸೇರಿದಂತೆ ಅನೇಕ ಗ್ರಾಮೀಣ ಪ್ರದೇಶದಲ್ಲಿ ಮದ್ಯ ಯಥೇಚ್ಛವಾಗಿ ಸಿಗುತ್ತದೆ. ಆಶ್ಚರ್ಯ ವೆಂದರೆ ಇದೆಲ್ಲಾ ನಡೆಯೋದು ಅನಧಿಕೃತವಾಗಿಯೇ ಇಷ್ಟೆಲ್ಲಾ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಹಾಗೂ
ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ಜಾಣ ಕುರುಡುತನದಿಂದ ಗಪ್ ಚುನ್ ಆಗಿದ್ದಾರೆ ಎಂದು ಸಾರ್ವ ಜನಿಕರು ಆರೋಪಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ಕಿರಾಣಿ ಅಂಗಡಿ, ಹಾಗೂ ಸಣ್ಣಪುಟ್ಟ ಕಪೌಟ್ ಅಂಗಡಿಗಳಲ್ಲಿ ಸುಮಾರು ದಿನಕ್ಕೆ 200 ರಿಂದ 300 ಬಾಟಲಿಗಳು ಮಾರಾಟ ವಾಗುತ್ತವೆ ಎಂದು
ವ್ಯಾಪಾರಿಯೊಬ್ಬ ಹೇಳುತ್ತಾನೆ.
ಗ್ರಾಮದಲ್ಲಿ ಒಂದರಲ್ಲಿಯೇ 1 ಕಿರಾಣಿ ಅಂಗಡಿ, ಪಾನ್ ಶಾಪ್ ಮತ್ತು ಕೆಲವು ಜನರ ಮನೆಯಲ್ಲಿ ಸೇರಿ ದಿನಕ್ಕೆ ಸುಮಾರು 500ರಿಂದ 700 ಬಾಟ ಲಿಗಳು ಮಾರಾಟವಾಗುತ್ತವೆ.
ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಬೆಲೆ: ಪಟ್ಟಣದಿಂದ ದೂರದಲ್ಲಿರುವ ಹಳ್ಳಿಗಳಲ್ಲಿ ಯಾವುದೆ ಬ್ರಾಂಡ್ ಕೇಳಿದರೂ ಸಿಗುತ್ತದೆ ಆದರೆ ದರ ಮಾತ್ರ ದುಬಾರಿ. ಸಾಮಾನ್ಯವಾಗಿ ಪಟ್ಟಣದ ಪರವಾನಿಗೆ ಹೊಂದಿದ ಬ್ರಾಂಡಿ ಶಾಪ್ ಗಳಲ್ಲಿ ಒಂದು ಬಿಯರ್‌ಗೆ 210 ರೂ.ಹಳ್ಳಿಯಲ್ಲಿ 240 ರಂತೆ ಹೀಗೆ ದುಬಾರಿ ಬೆಲೆಗೆ ಮಾರಾಟ ಮಾಡಿ ಒಂದು ಬಾಟಲಿಯಿಂದ ಸುಮಾರು 20-40
ರೂ.ಲಾಭ ಪಡೆಯುತ್ತಾರೆ.
ಇದರ ಜೊತೆಗೆ ಮುದಗಲ್ ಭಾಗದಲ್ಲಿ ಕಳ್ಳಬಟ್ಟಿ ಸಾರಾಯಿಗಂತೂ ಕೊರತೆಯೇ ಇಲ್ಲ.
ಅಧಿಕಾರಿಗಳು ಜಾಣ ಕುರುಡುತನ :ಗ್ರಾಮೀಣ ಭಾಗದಲ್ಲಿ ಅನಧಿಕೃತವಾಗಿ ಅಂಗಡಿಗಳಲ್ಲಿ ಮದ್ಯದ ಬಾಟಲಿಗಳು ಮಾರಾಟ ವಾಗುತ್ತಿದ್ದರೂ ಸಂಬಂಧಿಸಿದ ಯಾವುದೆ ಅಧಿಕಾರಿಗಳು ಕ್ರಮ ಕೈಗೊಳುತ್ತಿಲ್ಲ. ವ್ಯಾಪಾರಿಗಳೊಂದಿಗೆ ಕೆಲ ಪೊಲೀಸರು ಹಾಗೂ ಅಬಕಾರಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಶಂಕೆ ಮೂಡಿ ಬರುತ್ತಿದೆ.
ಆದರೆ ಲಿಂಗಸ್ಗೂರು ತಾಲೂಕಿನಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ಈ ಲಿಂಗಸ್ಗೂರ ತಾಲೂಕಿನಾದ್ಯಂತ ಯಾವ ಗ್ರಾಮೀಣ ಭಾಗಕ್ಕೆ ಬರುವುದೇ ಅಪ ರೂಪವಾಗಿದೆ. ಈ ಭಾಗದಲ್ಲಿ ಅನಿಷ್ಠ ಪದ್ಧತಿಯಾದ ಬಾಲ ಕಾರ್ಮಿಕ ಮತ್ತು ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆದಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ತಮ್ಮಗೆ ತಿಳಿದಾಗ ಮಾತ್ರ ಗ್ರಾಮ, ತಾಂಡಗಳ ಮೇಲೆ ಅಲ್ಪಸ್ವಲ್ಪ ದಾಳಿ ನಡೆಸಿ ಕೈ ತೊಳೆದುಕೊಂಡಿದ್ದಾರೆ. ಇದ್ದರಿಂದ ಯಾವುದೇ ಪರಿಣಾಮ ಬೀರಿಲ್ಲ ಎನ್ನಬಹುದು. ಮುದಗಲ್ ಎಂಎಸ್ ಎಲ್ ಸೇರಿ ಏಳು ಮದ್ಯದಂಗಡಿಗಳಿದ್ದು, ಸಿಎಲ್-9 ಬಾರ್ ನಾಲ್ಕು, ಸಿಎಲ್-7 ಬಾರ್ ಒಂದು, ಒಟ್ಟು 5 ರೆಸ್ಟೋರೆಂಟ್ ಇದೆ. ಇಲ್ಲಿ ಮಾತ್ರ ಬಾರ್‌ನಲ್ಲಿ ಕುಳಿತು ಮದ್ಯ ಸೇವಿಸಲು ಅನುಮತಿ ಇದೆ. ಅಬಕಾರಿ ನಿಯಮದ ಪ್ರಕಾರ ಉಳಿದ ಅಂಗಡಿಗಳಲ್ಲಿ ಮದ್ಯ ಸೇವಿಸಲು ಅವಕಾಶ ಇಲ್ಲದಿದ್ದರೂ ಟೇಬಲ್, ಕುರ್ಚಿ ಹಾಕಿ ಮದ್ಯ ಸೇವನೆಗೆ ಅವಕಾಶ ಕಲ್ಪಿಸಲಾಗಿದೆ. ಮತ್ತು ಈ ಭಾಗದಲ್ಲಿ ಅಕ್ರಮವಾಗಿ ಡಾಬ್, ಅಂಗಡಿಗಳಿಗೆ ರಾಜ ರೋಷವಾಗಿ ಅಕ್ರಮ ಮಧ್ಯ ಮಾರಾಟ ಹೆಚ್ಚಾಗಿದೆ, ಪಟ್ಟಣದ ಬಾರ್ ಗಳ ಮೂಲಕ
ಇಲ್ಲಿನ ಡಾಬಗಳಲ್ಲಿ ಹಾಗೂ ಗ್ರಾಮೀಣ ಭಾಗಕ್ಕೆ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದು ಅಲ್ಲಿ ಕೂಡ ಹೆಚ್ಚಿನ ದರಕ್ಕೆ ಮಧ್ಯ ಮಾರಟ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ.
ತಿಂಗಳಿಗೆ ಇಂತಿಷ್ಟು ಹಣ ಅಧಿಕಾರಿಗೆ; ಪ್ರತಿಯೊಂದು ಬಾರ್ ನಿಂದ ತಿಂಗಳಿಗೆ ಇಂತಿಷ್ಟು ಹಣ ಎಂದು ಪಿಕ್ಸ್ ಮಾಡಲಾಗಿದೆ. ಹಾಗೂ ಗ್ರಾಮೀಣ ಭಾಗಕ್ಕೆ ಬಾರ್ ಗಳಿಂದ ಸರಬರಾಜು ಆಗುವ ಅಕ್ರಮ ಮದ್ಯಕ್ಕೆ ಅದು ತಿಂಗಳಿಗೆ ಇಂತಿಷ್ಟು ಹಣ ಎಂದು ಎಲ್ಲಾ ಹಣವನ್ನು ಬಾರ್ ಮಾಲಿಕರು ತಿಂಗಳು ತಿಂಗಳು ಅಧಿಕಾರಿಗಳಿಗೆ ಕೊಡುವುದು ಮಾತ್ರ ನಿರಂತರವಾಗಿ ನಡೆದಿದೆ ಎಂಬ ಮಾಹಿತಿ ಕೂಡ ತಿಳಿದು ಬಂದಿದೆ.
ಲಿಂಗಸ್ಗೂರು ತಾಲ್ಲೂಕಿನಾದ್ಯಂತ ಬೆಳಗ್ಗೆ ಚಹಾ ಕುಡಿಯುವ ಸಮಯಕ್ಕೂ ಮೊದಲೇ ಮದ್ಯದ ಅಂಗಡಿ ತೆರೆದು ಮದ್ಯ ಮಾರಾಟ ಮಾಡುತ್ತಿದ್ದರೂ, ಅಬಕಾರಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಜನರ ತಿರ್ವ ಆಕ್ರೋಶಕ್ಕೆ ಕಾರಣವಾಗಿದೆ.
ಲಿಂಗಸ್ಗೂರು ಪಟ್ಟಣ ಹಾಗೂ ಮುದಗಲ್ ಪಟ್ಟಣದಲ್ಲಿ ನಾಗಲಾಪುರ, ಆಮದಿಹಾಳ, ಮಟ್ಟೂರು, ಜಕ್ಕರಮಡು ಸೇರಿ ಬಹುತೇಕ ಮದ್ಯದ ಅಂಗಡಿಗಳಲ್ಲಿ ನಸುಕಿನಿಂದಲೇ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಬಕಾರಿ ಇಲಾಖೆಯ ನಿಯಮಾನುಸಾರ
ಸಿಎಲ್ -9, ಸಿಎಲ್-7, ಸಿಎಲ್-2 ಅಂಗಡಿಗಳನ್ನು ಬೆಳಗ್ಗೆ 10 ರಿಂದ ರಾತ್ರಿ 10.30ರವರೆಗೆ ಮಾತ್ರ ತೆರೆಯಬೇಕು. ಆದರೆ, ಅಬಕಾರಿ ಇಲಾಖೆ ನಿಯಮಗಳನ್ನು ಲೆಕ್ಕಿಸದ ಅಂಗಡಿ ಮಾಲೀಕರು, ನಸುಕಿನಿಂದ ಮದ್ಯರಾತ್ರಿವರೆಗೂ ಮದ್ಯ ಮಾರಾಟ ಮಾಡುತ್ತಿರುವುದು ಸಾಮಾನ್ಯವಾಗಿದೆ.
ಮದ್ಯದ ಅಂಗಡಿಗಳ ಮೇಲೆ ನಿಗಾವಹಿಸಬೇಕಿರುವ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ನಿಯಮಗಳು ಲೆಕ್ಕಕ್ಕೆ ಇಲ್ಲದಂತಾಗಿವೆ ಎಂಬ ಆರೋಪವೂ ಕೇಳಿಬಂದಿದೆ. ಪರವಾನಗಿ ಪಡೆದ ಮದ್ಯದಂಗಡಿ ಮಾಲೀಕರ ಬದಲಾಗಿ, ಬೇರೆಯವರು ಅಂಗಡಿ ನಡೆಸುತ್ತಿದ್ದಾರೆ. ತಾಲ್ಲೂಕಿನಾದ್ಯಂತ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಮುಂದಾದರೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವವರೇ ಕಾದು ನೋಡಬೇಕಿದೆ.



