ಮುದಗಲ್ ನಲ್ಲಿ ಮದುವೆ ಸಿಎಂ ಆಗಮನಕ್ಕೆ – ಸ್ಥಳ ಪರಿಶೀಲನೆ

ಹನುಮಂತ ನಾಯಕ ಸಂಪಾದಕ. 9739109997
ಮುದಗಲ್ : ರಾಜ್ಯ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಎಸ್.ಹೂಲಗೇರಿ ರವರ ಪುತ್ರಿಯ ಮದುವೆಯ ಸಮಾರಂಭಕ್ಕೆ ಮುದಗಲ್ ಪಟ್ಟಣಕ್ಕೆ ರಾಜ್ಯದ ಸಿಎಂ ಹಾಗೂ ಡಿಸಿಎಂ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಾಯಚೂರು ಹೆಚ್ಚುವರಿ ಪೊಲೀಸ್ ವರಿಷ್ಠಧಿಕಾರಿಗಳು ಜಿ ಹರೀಶ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಮಾಜಿ ಶಾಸಕ ಹೂಲಗೇರಿ ಮಗಳ ಮದುವೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ರಾಜ್ಯ ಸಚಿವರು,ಶಾಸಕರುಗಳು, ಆಗಮಿಸುವ ಹಿನ್ನೆಲೆಯಲ್ಲಿ ರಾಯಚೂರು ಹೆಚ್ಚುವರಿ ಪೊಲೀಸ್ ವರಿಷ್ಠಧಿಕಾರಿಗಳು ಜಿ ಹರೀಶ್ ಭೇಟಿಯಾದ ನೀಡಿ ಸ್ಥಳ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಲಿಂಗಸುಗೂರು ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್ , ಪಿಎಸ್ಐ ವೆಂಕಟೇಶ ಮಾಡಗೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರಗೌಡ ಗೌಡರ,ಪ್ರಚಾರ ಸಮಿತಿ ಅಧ್ಯಕ್ಷ ಅರುಣಕುಮಾರ ಯರದಿಹಾಳ, ರಾಘವೇಂದ್ರ ಕುದರಿ, ಚಾಂದ ಪಾಶ ಜಮಾದಾರ್,ಕೃಷ್ಣ ಚಲುವಾದಿ,ಸಂಗಪ್ಪ ಹಿರೇಮನಿ, ಬಸವರಾಜ ಜೆಲ್ಲಿ,ಸತೀಶ ಬೋವಿ,ಕರಬಸನಗೌಡ ಜನತಾಪುರು ಸೇರಿದಂತೆ ಮುಂತಾದವರು ಇದ್ದರು.



