18 ರಂದು ಮುದಗಲ್ ಬಂದ್

ಹನುಮಂತ ನಾಯಕ ಸಂಪಾದಕ. 9739109997
ಮುದಗಲ್ ತಾಲೂಕು, ಕೋಟೆ ಉತ್ಸವ, ನೀರಿಗೆ ಒತ್ತಾಯಿಸಿ ಬಂದ್ ಕರೆ
ಮುದಗಲ್ : ಐತಿಹಾಸಿಕ ಮುದಗಲ್ ಪಟ್ಟಣವು ತಾಲೂಕು ಕೇಂದ್ರವಾಗಲು ಎಲ್ಲಾ ಅರ್ಹತೆ ಮತ್ತು ಮಾನದಂಡಗಳನ್ನು ಹೊಂದಿದ್ದರೂ ಕೂಡ ರಾಜಕೀಯ ಇಛ್ಛಾಶಕ್ತಿ ಕೊರತೆಯಿಂದ ತಾಲೂಕು ಘೋಷಣೆಯಿಂದ ವಂಚಿತವಾಗಿದ್ದು 18 ರಂದು ಮುದಗಲ್ ಪಟ್ಟಣವನ್ನು ಬಂದ್ ಮಾಡುವುದರ ಮೂಲಕ ನಮ್ಮ ಹೋರಾಟವನ್ನು ಗಟ್ಟಿಗೊಳಿಸಲಾಗುವುದು ಎಂದು ತಾಲೂಕು ಹೋರಾಟ ಸಮಿತಿ ಪದಾಧಿಕಾರಿ ಶರಣಪ್ಪ ಕಟ್ಟಿಮನಿ ಸೋಮುವಾರ ಹೇಳಿದರು. ಮುದಗಲ್ ನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕಳೆದ ೨೦೨೩ ರ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷದ ರಾಜ್ಯ ಮಟ್ಟದ ನಾಯಕರುಗಳು ಅಧಿಕಾರಕ್ಕಾಗಿ ಮುದಗಲ್ ತಾಲೂಕು ಕೇಂದ್ರದ ಘೋಷಣೆ, ಕೋಟೆ ಉತ್ಸವ, ಸಮರ್ಪಕ ಕುಡಿಯುವ ನೀರಿನ ಯೋಜನೆ ಅನುಷ್ಠಾನಗಳುಳ್ಳ ಟೊಳ್ಳು ಭರವಸೆಗಳ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದರೂ ಕೂಡ ಪಟ್ಟಣದ ಜನತೆಯ ಕನಸಿನ ಕೂಸಿನ ಯೋಜನೆಗಳ ಜೊತೆ ಚೆಲ್ಲಾಟ ವಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. 18 ರಂಧು ನಡೆಯುವ ಮುದಗಲ್ ಬಂದ್ ಗೆ ಪ್ರಗತಿಪರ, ಕನ್ನಡಪರ, ರೈತಪರ, ದಲಿತಪರ ಸೇರಿದಂತೆ 19 ಕ್ಕೂ ಹೆಚ್ಚು ಸಂಘಟನೆಗಳು ಭಾಗಿಯಾಗಲಿದ್ದು ಅಂಗಡಿ ಮುಂಗಟ್ಟುಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಬಂದ್ ಗೆ ಬೆಂಬಲಿಸಿದ್ದು ಶಾಂತಿಯುತವಾಗಿ ಬಂದ್ ಗೆ ನಡೆಸಲಾಗುವುದು ಎಂದರು. ಪಕ್ಷಾತೀತವಾಗಿ 18 ರಂದು ನಡೆಯುವ ಈ ಹೋರಾಟಕ್ಕೆ ಹಾಲಿ ಶಾಸಕ ಮಾನಪ್ಪ ವಜ್ಜಲ್, ಮಾಜಿ ಶಾಸಕ ಡಿ.ಎಸ್. ಹುಲಗೇರಿ ಸೇರಿದಂತೆ ಪಟ್ಟಣದ ಹಿರಿಯರನ್ನು ಕೂಡ ಬೆಂಬಲಿಸುವಂತೆ ಅಹ್ವಾನಿಸಲಾಗಿದ್ದು ಕೆಲ ಮಠಾಧೀಶರು ಆಗಮಿಸಿಲಿದ್ದಾರೆ. ಕರವೇ ಘಟಕಾಧ್ಯಕ್ಷ ಎಸ್.ಎ.ನಯೀಮ್ ಮಾತನಾಡಿ, ನಮ್ಮ ಹಕ್ಕು ಪಡೆಯಲು ಪಟ್ಟಣದ ಜನತೆಯ ಹಾಗೂ ಸಂಘಟನೆಗಳ ಒಡಗೂಡಿ ಸತತವಾಗಿ ಶಾಂತಿಯುತವಾಗಿ ಪ್ರತಿಭಟಿಸಲಾಗಿದ್ದು ನಮ್ಮ ಬೇಡಿಕೆಗಳು ಸಕಾರಾತ್ಮಕವಾಗಿ ಈಡೇರದೇ ಹೋದಲ್ಲಿ ಮುಂದೆ ಕಾಂತ್ರಿಕಾರಿ ಹೋರಾಟಕ್ಕೆ ಅಣಿಯಾಗುವುದು ಎಂದು ಎಚ್ಚರಿಕೆ ನೀಡಿದರು.
18 ರಂದು ಬಂದ್ ಹಿನ್ನೆಲೆಯಲ್ಲಿ ಬಸ್ ಸೌಕರ್ಯ, ಶಾಲಾ ಕಾಲೇಜುಗಳು, ಎಪಿಎಂಸಿ ಮಾರುಕಟ್ಟೆ, ಕಿರಾಣಿ, ಬಟ್ಟೆ ಅಂಗಡಿಗಳು ಬಂದ್ ಗೆ ಬೆಂಬಲಿಸಿದ್ದು ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಈ ಸೇವೆಗಳು ಲಭ್ಯವಿಲ್ಲ ಎಂದು ಸಂಘಟಕರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮುಖಂಡರಾದ ಮಂಜೂರ್ ಮಿಯಾ ಮುಜಾವರ್, ರಘುವೀರ ಮೇಗಳಮನಿ, ರಹೀಂ ಶಾ ಮಕಾಂದಾರ, ಮಂಜುನಾಥ ಬನ್ನಿಗೋಳಕರ, ಬಸವರಾಜ ಬಂಕದಮನಿ, ಸಂಜಯ್ ಚೆಲುವಾದಿ, ಹನುಮಂತ ಬಡಿಗೇರ್, ರಮೇಶ ಕಂದಗಲ್, ಸಾಬು ಹುಸೇನ್, ಮಹಾಂತೇಶ ಚಟ್ಟೇರ್, ಹಾಗೂ ಇತರರಿದ್ದರು.



