Uncategorized

ಮುದಗಲ್ ಅಂಜುಮನ್-ಎ- ಮುಸ್ಲಿಮೀನ್ ಕಮಿಟಿ ಪದಾಧಿಕಾರಿಗಳ ಆಯ್ಕೆ

ಹನುಮಂತ ನಾಯಕ ಸಂಪಾದಕ.         9739109997

ಮುದಗಲ್: ಪಟ್ಟಣದಲ್ಲಿ ಲಿಂಗಸೂಗೂರ ತಾಲೂಕು ಅಂಜುಮನ್-ಎ-ಮುಸ್ಲಿಮೀನ್ ಕಮಿಟಿ ವತಿಯಿಂದ ನಡೆದ ಮುದಗಲ್ ವಿಭಾಗದ ಕಮಿಟಿಯ ಅಧ್ಯಕ್ಷರಾಗಿ ಮಹ್ಮದ್ ರಸೂಲ್, ಉಪಾಧ್ಯಕ್ಷರಾಗಿ ಅರ್ಬಾಜ್ ಖಾನ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.

ಮುದುಗಲ್ ಪಟ್ಟಣದಲ್ಲಿ ಮಂಗಳವಾರ ಸಮಾಜದ ಮುಖಂಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುದುಗಲ್ ಅಂಜುಮನ್-ಎ-ಮುಸ್ಲಿಮನ್ ಕಮಿಟಿಯ ಅಧ್ಯಕ್ಷರಾಗಿ ಮಹ್ಮದ್ ರಸೂಲ್, ಉಪಾಧ್ಯಕ್ಷರಾಗಿ ಅರ್ಬಾಜ್ ಖಾನ,
ಪ್ರಧಾನಕಾರ್ಯದರ್ಶಿಯಾಗಿ ಅಸ್ಲಾಂ ಡೊಯಿ,ಖಜಾಂಚಿಯಾಗಿ ಆರಿಫ್ ಡೋಯಿ, ಕಾರ್ಯಾಧ್ಯಕ್ಷರಾಗಿ ಹುಸೇನ್ ಭಾಷಾ, ಜಂಟಿಕಾರ್ಯದರ್ಶಿಯಾಗಿ ಯಾಸೀನ್ ಪಾನ್ ವಾಲೆ, ಸಹ ಕಾರ್ಯದರ್ಶಿಯಾಗಿ ಅಬ್ರಾರ್ ಹಾಗೂ ಸದಸ್ಯರಾಗಿ ಮೈಬೂಬ್, ಶಾಹೀದ್, ರಾಜ್ ಮಹ್ಮದ್, ಖಾಸಿಂ ಅಲಿ ಡೊಂಗ್ರಿ, ಭಾಷಾ ಆನೆಹೊಸೂರ ಅವರನ್ನು ಸಮುದಾಯದ ಮುಖಂಡರ ಒಮ್ಮತದ ಅಭಿಪ್ರಾಯ ಮೇರೆಗೆ ಆಯ್ಕೆ ಮಾಡಲಾಯಿತು. ಎಂದು ಅಂಜುಮನ್-ಎ-ಮುಸ್ಲಿಮೀನ್ ಕಮಿಟಿ ಹುಸೇನ್ ತಿಳಿಸಿದರು. ಅಲ್ಲದೇ ಲಿಂಗಸೂಗೂರ ತಾಲೂಕು ಕಮಿಟಿಗೆ ಮುದಗಲ್ ವಿಭಾಗದಿಂದ ಜನಾಬ್ ರಹೀಮ್ ಶಾ ಮಕಾನದಾರ್, ಜನಾಬ್ ಮೋಹಿನುದ್ದಿನ್ ಭಂಡಾರಿ ಸಾಬ್, ಜನಾಬ್ ಅಬ್ದುಲ್ ಹಮೀದ್, ಜನಾಬ್ ಮೀರು ಹುಸೇನ್ ಮಕಾನದಾರ ಇವರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಅಂಜುಮನ್ ಲಿಂಗಸೂಗೂರ ತಾಲೂಕು ಕಮಿಟಿಯ ಪದಾಧಿಕಾರಿಗಳು & ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಮುದಗಲ್ ಸಮುದಾಯದ ಮುಖಂಡರಿದ್ದರು. ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

Hanumanth Nayaka

ಹನುಮಂತ ನಾಯಕ ಮಟ್ಟೂರಿನ ಸಾಂಸ್ಕೃತಿಕ ಪರಂಪರೆ ಮತ್ತು ಸಮಾಜಮುಖಿ ಚಟುವಟಿಕೆಗಳಿಗೆ ಶಕ್ತಿ ತುಂಬುತ್ತಿರುವ ಪ್ರಮುಖ ವ್ಯಕ್ತಿಗಳಲ್ಲೊಬ್ಬರಾದ ಹನುಮಂತ ನಾಯಕರು, “ಕಲ್ಯಾಣ ವೈಭವ” ಪತ್ರಿಕೆಯ ಗೌರವಾನ್ವಿತ ಸಂಪಾದಕರಾಗಿದ್ದಾರೆ. ಸಮೂಹ ಸೇವೆ, ಮಾಹಿತಿ ಹಂಚಿಕೆ ಮತ್ತು ಗ್ರಾಮೀಣ ಅಭ್ಯುದಯದ ಬಗ್ಗೆ ಅವರಿಗಿರುವ ಗಾಢ ಬದ್ಧತೆ ಅವರಿಗೆ ವಿಶಿಷ್ಟ ಗುರುತನ್ನು ತಂದಿದೆ. ಸಮಾಜದ ಪ್ರತಿಯೊಂದು ಮುಖ್ಯ ಕ್ಷಣ—ಮದುವೆ ಸಮಾರಂಭಗಳು, ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭಾವಂತರ ಸಾಧನೆಗಳು ಮತ್ತು ಗ್ರಾಮಾಭಿವೃದ್ಧಿ ಚಟುವಟಿಕೆಗಳನ್ನು ನಿಖರವಾಗಿ ದಾಖಲಿಸಿ ಜನತೆಗೆ ತಲುಪಿಸುವುದು ಅವರ ಮುಖ್ಯ ಧ್ಯೇಯ. ಅವರ ಸಂಪಾದಕೀಯ ಶೈಲಿ ಸ್ಪಷ್ಟ, ಜವಾಬ್ದಾರಿಯುತ ಮತ್ತು ಓದುಗರನ್ನು ಜತೆಗೇ ಸಾಗಿಸುವಂತಿದೆ. ಮಟ್ಟೂರು ಪ್ರದೇಶದಲ್ಲಿ ನಂಬಿಕೆ, ನಿಷ್ಠೆ ಮತ್ತು ಸೇವಾಭಾವನೆಗೆ ಪ್ರತೀಕವಾಗಿ ಗುರುತಿಸಿಕೊಂಡಿರುವ ಹನುಮಂತ ನಾಯಕರವರು, ತಮ್ಮ ಮಾಧ್ಯಮದ ಮೂಲಕ ಸಮಾಜದ ಒಗ್ಗಟ್ಟು, ಸಂಸ್ಕೃತಿ ಸಂರಕ್ಷಣೆ ಮತ್ತು ಜನಜಾಗೃತಿ ಮೂಡಿಸುವ ಪ್ರಯತ್ನಗಳಲ್ಲಿ ಸದಾ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಗ್ರಾಮದ ಅಭಿವೃದ್ದಿಗಾಗಿ ತಮ್ಮ ಜ್ಞಾನ, ಸಮಯ ಮತ್ತು ಶ್ರಮವನ್ನು ವಿನಯದಿಂದ ಹೂಡುತ್ತಿರುವ ಅವರ ಕೆಲಸವು ಮಟ್ಟುರು ಸಮುದಾಯಕ್ಕೆ ಅಮೂಲ್ಯ ಕೊಡುಗೆಯಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!