ಶಿವಭಕ್ತ ಶ್ರೀ ಬೇಡರ ಕಣ್ಣಪ್ಪ ವಿಶೇಷ ಪೂಜೆ ಮಂಜುನಾಥ ದೊರೆ

ಹನುಮಂತ ನಾಯಕ ಸಂಪಾದಕ. 9739109997
ಸಿರವಾರ: ಸಿರವಾರ ತಾಲೂಕಿನ ಅತ್ತನೂರು ಗ್ರಾಮದಲ್ಲಿ ನಿನ್ನೆ ಸಂಜೆ ಶಿವರಾತ್ರಿ ಹಬ್ಬದ ಪ್ರಯುಕ್ತ ಶಿವಭಕ್ತ ಬೇಡರ ಕಣ್ಣಪ್ಪನ ವೃತ್ತಕ್ಕೆ
ಪೂಜೆಯನ್ನು ಸಮಾಜದ ಯುವ ಮುಖಂಡ ಮಂಜುನಾಥ್ ದೊರೆ ನೆರವೇರಿಸಿದರು
ಹಾಗೂ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ನಮ್ಮ ಸಮಾಜ ದೈವ ಭಕ್ತಿಗೆ ಕಣ್ಣು ಕೊಟ್ಟ ಗುರು ಭಕ್ತಿಗೆ ಬೆರಳು ಕೊಟ್ಟ ಪ್ರಜೆಗಳೇ ರಕ್ಷಣೆಗಾಗಿ ಖಡ್ಗ ಹಿಡಿದ ಸಮಾಜ ಈಗಿನ ಕಾಲ ಘಟ್ಟದಲ್ಲಿ ಸಮಾಜ ಶಿಕ್ಷಣ ಪಡೆದಾಗ ಮಾತ್ರ ಆರ್ಥಿಕವಾಗಿಯೂ ರಾಜಕೀಯವಾಗಿಯೂ ಶೈಕ್ಷಣಿಕವಾಗಿಯೂ ಮುಂದ ಬರಲು ಸಾಧ್ಯ ಎಂದು ಕರೆ ನೀಡಿದರು
ಆ ದಿನದಿಂದ ಪ್ರತಿದಿನ ಬೇಟೆಯಾಡಿದ ಮಾಂಸವನ್ನು ನೈವೇದ್ಯವಾಗಿ ಅರ್ಪಿಸಿ, ತನ್ನ ಬಾಯಲ್ಲಿ ತಂದ ನೀರಿನಿಂದ ಅಭಿಷೇಕ ಮಾಡುತ್ತಿದ್ದನು ಬೇಡರ ಕಣ್ಣಪ್ಪನಿಗೆ ಪೂಜಾ ಮಾಡುವುದು ವಿಧಾನ ಗೊತ್ತಿರಲಿಲ್ಲ. ಆದರೆ ಅವನ ಭಕ್ತಿ ನಿಷ್ಪಕ್ಷಪಾತವಾಗಿ ಮತ್ತು ನಿಷ್ಕಲ್ಮಶವಾಗಿತ್ತು
ಒಂದು ದಿನ ಪೂಜೆ ಸಲ್ಲಿಸುವ ಸಮಯದಲ್ಲಿ ಶಿವಲಿಂಗದ ಕಣ್ಣುಗಳಿಂದ ರಕ್ತಸ್ರಾವವಾಗುತ್ತಿದ್ದುದನ್ನು ಕಂಡ ಬೇಡರ ಕಣ್ಣಪ್ಪ ತನ್ನ ಪ್ರಭುವಿನ ನೋವನ್ನು ತಾಳಲಾರದೆ ತನ್ನ ಕೈಯಲ್ಲಿ ಹಿಡಿದುಕೊಂಡು ಬಾಣದಿಂದ ಒಂದು ಕಣ್ಣನ್ನು ಕಿತ್ತು ಅರ್ಪಿಸಿದನು ನಂತರ ಇನ್ನೊಂದು ಕಣ್ಣನ್ನೂ ಅರ್ಪಿಸಲು ಸಿದ್ಧನಾದಾಗ ಶಿವನು ಪ್ರತ್ಯಕ್ಷನಾಗಿ ಅವನನ್ನು ತಡೆದು, ಅವನ ಭಕ್ತಿಗೆ ಮೆಚ್ಚಿ ಕಣ್ಣುಗಳನ್ನು ಮರಳಿ ನೀಡಿ ಮುಕ್ತಿಯನ್ನು ಅನುಗ್ರಹಿಸಿದನು
ಈ ಘಟನೆ ಭಕ್ತಿಯ ಪರಾಕಾಷ್ಠೆಯ ಸಂಕೇತವಾಗಿ ಇಂದಿಗೂ ಸ್ಮರಿಸಲ್ಪಡುತ್ತದೆ ಎಂದು ಹೇಳಿದರು ಊರಿನ ನೂರಾರು ಯುವ ಮುಖಂಡರು ಭಾಗವಹಿಸಿದ್ದರು.



