Uncategorized
ಮುದಗಲ್; ಆಸ್ತಿಗಾಗಿ ತಾಯಿಯನ್ನೇ ಕೊಲೆ ಮಾಡಿದ ಮಗ

ಹನುಮಂತ ನಾಯಕ ಸಂಪಾದಕ. 9739109997
ಮುದಗಲ್: ಪಟ್ಟಣ ಸಮೀಪದ ಜಕ್ಕರಮಡು ತಾಂಡದಲ್ಲಿ ಆಸ್ತಿಗಾಗಿ ತಾಯಿಯನ್ನೇ ಮಗ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಕುಮಾರ್ (30) ಮಗನಿಂದಲೇ ಕೊಲೆಯಾದ ದುರ್ದೈವಿ ಚಂದಮ್ಮ(50) ಕೊಲೆ ಆರೋಪಿ ಕುಮಾರ್ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ಇದ್ದಿದ್ದು ಇತ್ತಿಚೆಗೆ ತಮ್ಮ ಗ್ರಾಮಕ್ಕೆ ಬಂದಿದ್ದನು. ಕಂಠಪೂರ್ತಿ ಮದ್ಯ ಸೇವಿಸಿ ತಾಯಿಗೆ ಮೂರು ಎಕರೆ ಆಸ್ತಿಯಿದ್ದು, ಆಸ್ತಿ ಪಡೆಯಲು ಮಗ ಕುಮಾರ ಪಾಲು ಮಾಡಿಕೊಡಿ ಎಂದು ಪಟ್ಟು ಹಿಡಿದಿದ್ದಾನೆ. ತಾಯಿ ಇವಗ ಆಸ್ತಿ ಪಾಲು ಮಾಡಲು ಆಗುವುದಿಲ್ಲ ಎಂದು ಹೇಳಿದ್ದರಿಂದ ತಾಯಿಯನ್ನು ಸಾಯಿಸಿದರೆ ಆಸ್ತಿ ಸಿಗುತ್ತದೆ ಎಂದು ಭಾವಿಸಿ ತಾಯಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಚಂದಮ್ಮ ಮೃತಪಟ್ಟ ವಿಚಾರ ತಿಳಿದಿದ್ದು ಸ್ಥಳಕ್ಕೆ ಪೊಲೀಸರು ಪರಿಶೀಲಿಸಿದ್ದಾರೆ. ಆರೋಪಿ ಕುಮಾರ್ ನನ್ನು ಬಂಧಿಸಲಾಗಿದೆ ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



