Uncategorized
ಮಟ್ಟೂರಿನಲ್ಲಿ ಅದ್ದೂರಿಯಾಗಿ ಜರುಗಿದ ರಾಮಲಿಂಗೇಶ್ವರ ರಥೋತ್ಸವ

ಹನುಮಂತ ನಾಯಕ ಸಂಪಾದಕರು. 9739109997
ಮುದಗಲ್ : ಪಟ್ಟಣ ಸಮೀಪದ ಮಟ್ಟೂರು ಗ್ರಾಮದಲ್ಲಿ
ಶ್ರೀ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಅದ್ದೂರಿಯಾಗಿ ರಥೋತ್ಸವ ಶನಿವಾರ ನೂರಾರು ಭಕ್ತರ ಮಧ್ಯೆ ವಿಜೃಂಭಣೆಯಿಂದ ಜರುಗಿತು. ಭಕ್ತರು ರಥೋತ್ಸವಕ್ಕೆ ಉತ್ತತ್ತಿ, ಹಾರ, ಹಣ್ಣು ಅರ್ಪಿಸಿ ಭಕ್ತಿಭಾವ ಮೆರೆದರು. ಶ್ರೀ ರಾಮಲಿಂಗೇಶ್ವರ ಲಿಂಗಕ್ಕೆ ವಿವಿಧ ಪೂಜಾ ಕಾರ್ಯಗಳು ನೆರವೇರಿದವು. ಬೆಳಗ್ಗೆಯಿಂದ ಭಕ್ತಾಧಿಗಳು ರಾಮಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ವಿವಿಧ ಅಭಿಷೇಕ ಕಾರ್ಯಗಳಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ವಿವಿಧ ಮಠದ ಶ್ರೀಗಳು, ವಿವಿಧ ಪಕ್ಷದ ಮುಂಖಡರು, ಯುವಕರು ರಥೋತ್ಸವದಲ್ಲಿ ಪಾಲ್ಗೊಂಡು ಜೈಕಾರ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.



