ಮಟ್ಟೂರಿನಲ್ಲಿ ; ಹಣ ನೀಡಿದವರಿಗೆ ಮನೆ ಆರೋಪ

ಹನುಮಂತ ನಾಯಕ ಸಂಪಾದಕರು 9739109997
ಗ್ರಾಮ ಸಭೆ ಮಾಡದೆ ಮನೆ ಮಾರಾಟ
ಮಸ್ಕಿ: ಬಸವ ವಸತಿ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ ಹಣ ನೀಡಿದವರಿಗೆ ಮನೆಗಳನ್ನು ನೀಡಿದ್ದಾರೆ ಎಂದು ಮಟ್ಟೂರು ಗ್ರಾಮಸ್ಥರು ಆರೋಪಿಸಿದ್ದಾರೆ. ಈಗಾಗಲೇ 50 ಮನೆಗಳಿಗೆ ಹಣ ತೆಗೆದುಕೊಂಡು ಮನೆ ನೀಡಿದ್ದಾರೆ ಎಂಬುದು ಆರೋಪ ಕೇಳಿಬಂದಿದೆ.
ಕೂಡಲೇ ಅಂತಹ ಮನೆಗಳನ್ನು
ತಡೆ ತಡೆಹಿಡಿದು ಅರ್ಹರಿಗೆ ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಮಸ್ಕಿ ತಾಲೂಕಿನ ಮಟ್ಟೂರು ನಲ್ಲಿ ನಡೆದಿದೆ ಈಗಾಗಲೇ ಬಸವ ವಸತಿ ಹಾಗೂ ಅಂಬೇಡ್ಕರ್ ಶಾಸಕರ ನೇತೃತ್ವದಲ್ಲಿ ಸುಮಾರು 50 ಮನೆಗಳು ಇದ್ದು. 50 ಮನೆಗಳನ್ನು ಗ್ರಾಮ ಸಭೆ ನಡೆಸದೇ ಮಂಜೂರು ಮಾಡಲಾಗಿದೆ.
ಹೀಗಾಗಿ ಇವುಗಳಿಗೆ ಈಗಾಗಲೇ ಜಿಪಿಎಸ್ ಮಾಡಲಾಗಿದೆ. ಕೂಡಲೇ ಬಿಲ್ ತಡೆಹಿಡಿಯಬೇಕು ಎಂದು ಆಗ್ರಹಿಸಿದರು.
ವಾರ್ಡ್‌ಸಭೆ ಮತ್ತು ಗ್ರಾಮ ಸಭೆ ಮಾಡಿದೆ ಆಯ್ಕೆ ಮಾಡಲಾಗಿದೆ. ಒಬ್ಬೊಬ್ಬ ಫಲಾನುಭವಿಗಳಿಂದ 12000 ರಿಂದ 15000 ಹಣ ಪಡೆದಿದ್ದಾರೆ ಎಂದು ದೂರಿದರು. ಮೊದಲು 150 ಮನೆಗಳಿಗೂ ಕೂಡ ಹಣ ಪಡೆದಿದ್ದರು. ಅವುಗಳು ತಡೆ ಹಿಡಿಯಲಾಗಿದೆ ಎಂದು ಹೇಳಲಾಗಿದೆ. ಈ ಮನೆಗಳಲ್ಲಿ ಮಸ್ಕಿ ಶಾಸಕರ ಕುಮ್ಮಕ್ಕು ಇದೆ ಎಂಬುದು ತಿಳಿದು ಬಂದಿದೆ. ಈ ಕೂಡಲೇ ಮೇಲಾಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಕಳಪೆ; ಮಟ್ಟೂರು ಗ್ರಾಮ ಹಾಗೂ ವ್ಯಾಪ್ತಿಯಲ್ಲಿ ಮೆಟ್ಲಿಂಗ್ ( ರಸ್ತೆ) ಹಾಗೂ ಸಿಡಿ ಕಾಮಗಾರಿ ಈಗಾಗಲೇ ಮಾಡಿದ್ದು ಯೋಜನೆಯಂತೆ ಕಾಮಗಾರಿ ಮಾಡದೇ ಸಂಪೂರ್ಣ ಕಳಪೆ ಮಟ್ಟದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮಟ್ಪೂರು ಗ್ರಾಮ ಹಾಗೂ ವ್ಯಾಪ್ತಿಯಲ್ಲಿ ನೆಡೆದಿರುವ ಹೆಚ್ಚುವರಿ ಯೋಜನೆಡಿಯಲ್ಲಿ ಮೆಟ್ಲಿಂಗ್ ಹಾಗೂ ಸಿಡಿ ನಿರ್ಮಾಣದ ಕೆಲಸಕ್ಕೆ ಕಳಪೆ ಮಟ್ಟದ ಮಣ್ಣು ಉಯೋಗಿಸಲಾಗಿದೆ. ಗುಣ ಮಟ್ಟದ ಕಾಮಗಾರಿ ನಿಯಮಗಳನ್ನು ಉಲ್ಲಂಘಿಸಿ ರಸ್ತೆ ಕೆಲಸ ಮಾಡುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಕಾಮಗಾರಿ ಕುರಿತು ಇಲಾಖೆ ಎಂಜಿನೀಯರ್ ಗಮನಕ್ಕೆ ತರಲಾಗಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ಕೇಳಿದರೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಮಟ್ಟೂರು ಭಾಗದಲ್ಲಿ ಕಳಪೆ ಕಾಮಗಾರಿಗಳು ಹೆಚ್ಚಾಗಿದ್ದು, ಸರಕಾರದ ಹಣ ವ್ಯರ್ಥವಾಗುತ್ತಿದೆ. ಈ ಬಗ್ಗೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಹರಿಸಿ ತಪ್ಪಿತಸ್ಥರ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಉತ್ತಮ ರಸ್ತೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರ ಆಗ್ರಹಿಸಿದ್ದಾರೆ. ಉದ್ಯೋಗ ಖಾತ್ರಿ ಕೆಲಸಕ್ಕೆ ಬರದೆ ದೂರದ ಬೆಂಗಳೂರು, ಮಂಗಳೂರು, ಹೊಸಪೇಟೆ ಯಲ್ಲಿ ಕೆಲಸಕ್ಕೆ ಹೋದವರ ಖಾತೆಗೆ ಹಣ ಜಮಾ ಮಾಡಿರುವ ಆರೋಪ ಕೇಳಿ ಬರುತ್ತಿದೆ. ಮಟ್ಟೂರು ಗ್ರಾಮ ಪಂಚಾಯತಿ ಹಾಗೂ ವ್ಯಾಪ್ತಿಯಲ್ಲಿ ಹೆಚ್ಚುವರಿ ಯೋಜನೆಯ ಅನುದಾನದಲ್ಲಿ ಅರೇ ಬರೇ ಕಳಪೆ ಮಟ್ಟದ ಮಣ್ಣು ಹಾಕಿ ಒಂದು ಮೆಟ್ಲಿಂಗ್ ರಸ್ತೆ ಸೇರಿದಂತೆ ಇನ್ನಿತರ ಕೆಲಸಗಳು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದಾವೆ ಈ ಬಗ್ಗೆ ಮೇಲಾಧಿಕಾರಿಗಳ ಗಮನ ಹರಿಸುತ್ತಿಲ್ಲ. ಕೋಟಿಗಟ್ಟಲೆ ಹಣ ವ್ಯರ್ಥ ವಾಗುತ್ತಿದ್ದೆ ಎಂದು ಗ್ರಾಮಸ್ಥರು ಹೇಳುತ್ತಾರೆ.ಮಟ್ಟೂರು ಗ್ರಾಮದಲ್ಲಿ ಕೋಟಿಗಟ್ಟಲೆ ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದು. ಅದರಲ್ಲಿ ಎಸ್ಸಿ ಎಸ್ಟಿ ಅನುದಾನ ಕೂಡ ತಿಂದು ತೇಗಿದ್ದಾರೆ ಎಂಬುದು ಕೇಳಿ ಬರುತ್ತಿದೆ. ಈ ರೀತಿ ಮಟ್ಟೂರು ಗ್ರಾಮದಲ್ಲಿ ಸರ್ಕಾರದ ಹಣವನ್ನು ಸಂಪೂರ್ಣ ದುರ್ಬಳಕೆ ಮಾಡಿಕೊಂಡಿದ್ದಾರೆ ಈ ಬಗ್ಗೆ ಕೂಡಲೇ ತನಿಖೆ ಮಾಡಬೇಕಾಗಿದೆ.