ಸಣ್ಣ ನೀರಾವರಿ ಇಲಾಖೆಯಿಂದ ಅಂತರ್ಜಲ ವೃದ್ಧಿ: ಬೋಸರಾಜು

ವಿವಿಧ ಕಾಮಗಾರಿಗಳಿಗೆ ಎನ್.ಎಸ್.ಬೋಸರಾಜರಿಂದ ಭೂಮಿ ಪೂಜೆ
ಮಸ್ಕಿ: ಅಂತರ್ಜಲ ಹೆಚ್ಚಿಸುವ ಸಲುವಾಗಿ ಸಣ್ಣ ನೀರಾವರಿ ಇಲಾಖೆಯಿಂದ ಏತ ನೀರಾವರಿ ಯೋಜನೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಹೇಳಿದರು.
ತಾಲೂಕಿನ ಬಳಗಾನೂರಿನ ಹಳ್ಳದಲ್ಲಿ ನಾರಾಯಣ ನಗರ ಕ್ಯಾಂಪ್ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸಣ್ಣ ನೀರಾವರಿ ಇಲಾಖೆಯಿಂದ ೨ ಕೋಟಿ ಮತ್ತು ಸಾಗರ ಕ್ಯಾಂಪಿನ ರೈತರ ಜಮೀನುಗಳಿಗೆ ನೀರೋಧಗಿಸಲು ೨ ಕೋಟಿ, ಮಾರಲದಿನ್ನಿ ತಾಂಡಕ್ಕೆ ಸಂಪರ್ಕ ಕಲ್ಪಿಸುವ ಬ್ರೀಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ೫ ಕೋಟಿ, ಕಡದರಾಳ ಗ್ರಾಮದಲ್ಲಿ ಕೆರೆ ತುಂಬಿಸುವ ಯೋಜನೆಗೆ ೪೫೭ ಕೋಟಿ ರೂ.ಗಳ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು ನಾರಾಯಣ ನಗರ ಕ್ಯಾಂಪಿನ ರೈತರ ಜಮೀನುಗಳ ಕೊನೆ ಭಾಗದಲ್ಲಿರುವದರಿಂದ ಸರಿಯಾಗಿ ಕಾಲುವೆ ನೀರು ಹರಿಯದೇ ಬೆಳೆಗಳು ಹಾಳಾಗುತ್ತಿರುದರಿಂದ ಹಳ್ಳದಿಂದ ನೀರನ್ನು ಲಿಪ್ಟ್ ಮಾಡಿ ಕಾಲುವೆಗಳ ಮೂಲಕ ಹರಿಸಲಾಗುತ್ತದೆ. ಅದೇ ರೀತಿಯಾಗಿ ೬೫ ನಂಬರಿನ ಕಾಲುವೆ ಯೋಜನೆಯೂ ಟೆಂಡರ್ ಕರೆಯುವ ಹಂತದಲ್ಲಿ ಈ ಕಾಮಗಾರಿಯನ್ನು ಅಧಿಕಾರಿಗಳು ಮುಂದೆ ನಿಂತುಕೊಂಡು ಕೆಲಸ ತೆಗೆದುಕೊಳ್ಳಬೇಕು. ಗುಣಮಟ್ಟದಿಂದ ಕಾಮಗಾರಿ ಮುಗಿಸಿ ಶೀಘ್ರವೇ ಯೋಜನೆ ಕಾರ್ಯರೂಪಕ್ಕೆ ತರಬೇಕು. ಅಧಿಕಾರಿಗಳು ಯಾವುದೇ ಕಾರಣಕ್ಕೆ ಗುತ್ತಿಗೆದಾರರ ಜತೆ ಶಾಮೀಲಾಗುವಂಗಿಲ್ಲವೆAದು ಸಣ್ಣ ನೀರಾವರಿ ಇಲಾಖೆಯ ಚೀಪ್ ಸೆಕ್ರೆಟರಿಗೆ ತಾಕೀತು ಮಾಡಿದರು.
ಅಂತರ್ಜಲ ಹೆಚ್ಚಿಸುವ ಸಲುವಾಗಿ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಎಲ್ಲ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ನಮ್ಮ ಇಲಾಖೆಯಿಂದ ಜಿಲ್ಲೆಯಲ್ಲಿ ೧೫೦೦ ಕೋಟಿ ವಿವಿಧ ಕಾಮಗಾರಿಗಳಿಗೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ಮಾಡಿಲಿದ್ದಾರೆ ಎಂದು ಹೇಳಿದರು.
ರಾಜ್ಯದ ೨೭ ಸಾವಿರ ಕಡೆಗಳಲ್ಲಿ ಅಂತರ್ಜಲ ಕುಸಿಯುತ್ತಿರುವದರಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಚೆಕ್ ಡ್ಯಾಂ, ಬ್ರೀಡ್ಜ್ ಕಂ ಬ್ಯಾರೆಜ್ ಮತ್ತು ಕೆರೆಗಳನ್ನು ತುಂಬಿಸಲು ಸಣ್ಣ ನೀರಾವರಿ ಇಲಾಖೆಯಿಂದ ಮುಂದಾಗಿದೆ ಎಂದು ಹೇಳಿದರು.
ನಂತರ ಶಾಸಕ ಆರ್.ಬಸನಗೌಡ ತುರವಿಹಾಳ ಮಾತನಾಡಿ ಕ್ಷೇತ್ರದ ಒಣ ಬೇಸಾಯ ಪ್ರದೇಶಗಳಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಎಸ್.ಸಿ ಮತ್ತು ಎಸ್.ಟಿ ಜನಾಂಗದ ಬಡ ರೈತರಿಗೆ ಈಗಾಗಲೇ ೯೮ ಬೋರ್ವೆಲ್ ಕೋರೆಯಸಿಲಾಗಿದೆ. ಕೊನೆ ಭಾಗದ ರೈತರಿಗೆ ನಿರೋದಗಿಸುವ ಸಲುವಾಗಿ ಚೆಕ್ಡ್ಯಾಂ ನಿರ್ಮಿಸಿ ಚೆಕ್ ಡ್ಯಾಂನಿAದ ರೈತರ ಹೊಲಗಳಿಗೆ ನೀರು ಹರಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಹನುಮಂತಪ್ಪ ಮುದ್ದಾಪೂರು, ವೆಂಕಟರಡ್ಡಿ ಹಾಲಾಪೂರು, ಅಂದಾನಪ್ಪ ಗುಂಡಳ್ಳಿ, ಬಸನಗೌಡ ಪಾಟೀಲ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರಿದ್ದರು.
—————–
ಬಾಕ್ಸ್ ನಲ್ಲಿ:
ನರೇಗಾ ಯೋಜನೆ ತಿದ್ದುಪಡಿ ಮಾಡಿ ಕೇಂದ್ರ ಸರ್ಕಾರ ನರೇಗಾ ಸ್ವರೂಪವೇ ಬದಲಿಸಿದೆ. ಇದು ಬಡವರ ಮೇಲೆ ಬರೆ ಎಳೆದಿದೆ ಆದ್ದರಿಂದ ಇದಕ್ಕೆ ಕಾಂಗ್ರೆಸ್ ಪಕ್ಷ ವಿರೋಧ ವ್ಯಕ್ತಪಡಿಸಿದೆ. ಮುಂಬರುವ ದಿನಗ¼ಲ್ಲಿ ಉದ್ಯೋಗ ಖಾತ್ರಿ ಬಂದ್ ಮಾಡುವ ಹುನ್ನಾರ ಕೇಂದ್ರ ಸರ್ಕಾರ ಮಾಡುತ್ತಿದೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿ ಜನರಿಗೆ ಆರ್ಥಿಕವಾಗಿ ಬಲ ನೀಡಿದೆ.
-ರಾಜಶೇಖರ ಹಿಟ್ನಾಳ ಸಂಸದರು ಕೊಪ್ಪಳ.



