Uncategorized
ಮುದಗಲ್ ಚರಂಡಿಯಲ್ಲಿ ಕುಡಿಯುವ ನೀರು ಪೈಪ್‌ಲೈನ್: ನಾಗರಿಕರು ಆರೋಪ

ಹನುಮಂತ ನಾಯಕ ಸಂಪಾದಕ. 9739109997
ಮುದಗಲ್: ಸ್ಥಳೀಯ ಚರ್ಚ್ ಹಿಂಭಾಗದಲ್ಲಿ ( ಕರಿಗೆರ ಓಣಿ) ಯಲ್ಲಿ ಚರಂಡಿಯಲ್ಲಿ ಕುಡಿಯುವ ನೀರಿನ ಪೈಪ್ ಆಳವಡಿಸಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣದಲ್ಲಿ ಎಂಟತ್ತು ದಿನಕ್ಕೊಮ್ಮೆ ಕುಡಿಯುವ ಬರುತ್ತಿದ್ದು ಅಂತದರಲ್ಲಿ ಇಲ್ಲಿನ ಪುರಸಭೆಯ ಅಧಿಕಾರಿಗಳು ಸಿಬ್ಬಂದಿಗಳು ಚರಂಡಿಯಲ್ಲಿ ಪೈಪ್‌ಗಳನ್ನು ಹಾಕಿ ನೀರು ಪೂರೈಕೆ ಮಾಡುತ್ತಿದ್ದು, ಈ ನೀರು ದುರ್ವಾಸನೆಯಿಂದ ಕೂಡುತ್ತದೆ. ಜನರು ಈ ನೀರನ್ನೇ ಕುಡಿದರೆ ಆರೋಗ್ಯ ಕೆಟ್ಟರೆ ಯಾರು ಹೊಣೆಯಾಗುತ್ತಾರೆ ಎಂದು ಸ್ಥಳೀಯ ಆರೋಗ್ಯಪ್ಪ ಪ್ರಶ್ನಿಸಿದ್ದಾರೆ.
ಚರಂಡಿಯಲ್ಲಿ ಪೈಪ್‌ಲೈನ್ ಮಾಡಿದ್ದು ಒಂದು ವೇಳೆ ಪೈಪ್‌ಗಳು ಒಡೆದು ಅದರಲ್ಲಿ ಚರಂಡಿ ನೀರು ಮಿಶ್ರಣವಾದರೆ ಜನರ ಆರೋಗ್ಯದ ಗತಿ ಏನು ಈ ಬಗ್ಗೆ ಪುರಸಭೆ ನಿರ್ಲಕ್ಷ್ಯವಹಿಸಿದೆ ಎಂದು ದೂರಿದ್ದಾರೆ. ಕೂಡಲೇ ಈ ಪೈಪು ಲೈನನ್ನು ತೆಗೆದು ಬೇರೆ ಕಡೆ ಪೈಪು ಲೈನು ಮಾಡಬೇಕು ಎಂದು ಸ್ಥಳೀಯರು ಆರೋಪಿಸಿದ್ದಾರೆ



