ಲಿಂಗಸ್ಗೂರು; ಗ್ರಾಮೀಣ ಭಾಗದಲ್ಲಿ ಮದ್ಯ ಅಕ್ರಮ ಮಾರಾಟ ತಡೆಗೆ ಮಹಿಳೆಯರಿಂದ ಒತ್ತಾಯ

ಹನುಮಂತ ನಾಯಕ ಸಂಪಾದಕ. 9739109997
ಲಿಂಗಸ್ಗೂರು: ತಾಲ್ಲೂಕಿನ ಪೂಲಭಾವಿ ಗ್ರಾಮದಲ್ಲಿ ಅಕ್ರಮ ಮದ್ಯ ಅಕ್ರಮ ಮಾರಾಟದಿಂದ ದಿನನಿತ್ಯ ಜಗಳ ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದರಿಂದ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಅಬಕಾರಿ ಇಲಾಖೆ ಅವರಿಗೆ
ಪೂಲಭಾವಿ ಗ್ರಾಮಸ್ಥರು
ಮನವಿ ಸಲ್ಲಿಸಿದರು. ಇತ್ತೀಚೆಗೆ
ಯುವಕರು ಸಹ ಸಾರಾಯಿ ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದನ್ನು ತಡೆಯಬೇಕಾದ ಅಬಕಾರಿ ಇಲಾಖೆಯು ಕಣ್ಣಿದ್ದೂ ಕುರುಡನಂತೆ ವರ್ತಿಸುತ್ತಿದೆ ಎಂದು ಗ್ರಾಮದ ಮಹಿಳೆಯರು ಕಣ್ಣೀರು ಹಾಕಿ ಅಬಕಾರಿ ಇಲಾಖೆ ಅಧಿಕಾರಿ ಲಕ್ಷ್ಮೀದೇವಿ ಹಾಗೂ ಸ್ಥಳೀಯ ಠಾಣೆಗೆ ಮನವಿ ಸಲ್ಲಿಸಿ. ಮಾತನಾಡಿದ ಗ್ರಾಮಸ್ಥರು ಪೂರ್ವಭಾವಿ ಗ್ರಾಮದಲ್ಲಿ ಸಣ್ಣ ಸಣ್ಣ ಅಂಗಡಿ ಡಬ್ಬಾ ಅಂಗಡಿಗಳಲ್ಲಿ ನಿತ್ಯ ಸಾವಿರಾರು ಬಾಟಲಿಗಳು ಮಾರಟ ಮಾಡುತ್ತಿದ್ದು. ಆದ್ದರಿಂದ ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಇನ್ನು ಬರುತ್ತಿದ್ದಾವೆ ಕುಡಿದು ಬಂದು ಮನೆಯಲ್ಲಿ ಜಗಳ ಆಡುತ್ತಾರೆ. ಈ ರೀತಿ ಕುಡಿದು ಗ್ರಾಮದಲ್ಲಿ ಗಲಾಟೆ ಮಾಡುತ್ತಿದ್ದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಈಗಾಗಲೇ ಅನೇಕ ಬಾರಿ ಮನವಿ ಕೂಡ ಮಾಡಲಾಗಿತ್ತು. ಆದರೆ ಮುಚ್ಚಳಿಕೆ ಪತ್ರ ಬರೆದು ಕೊಟ್ಟಿದ್ದರು ಮರಳಿ ಗ್ರಾಮದಲ್ಲಿ ನಿತ್ಯ ಮಧ್ಯೆ ಮಾರಟ ಜಾಸ್ತಿ ಆಗುತ್ತಿದೆ. ಸಣ್ಣ ಮಕ್ಕಳು ಸಹ ಸರಾಯಿ ಚಟಕ್ಕೆ ದಾಸರಾಗುತ್ತಿರುವ ವಿದ್ಯಮಾನ ನಡೆಯುತ್ತಿರುವುದು ದುದೈರ್ವದ ಸಂಗತಿಯಾಗಿದೆ. ಈ ಗ್ರಾಮದ ವ್ಯಾಪ್ತಿಯಲ್ಲಿ ಇಂದಿನಿಂದಲೇ ಸಾರಾಯಿ ಅಕ್ರಮ ಮಾರಾಟ ನಿಲ್ಲಬೇಕು. ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ಸೇರಿದಂತೆ ಇನ್ನಿತರರು ಇದ್ದರು.



