ಸರ್ಕಾರಿ ನಿವೃತ್ತ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ

ಹನುಮಂತ ನಾಯಕ ಸಂಪಾದಕ. 9739109997
ಲಿಂಗಸ್ಗೂರು: ಕರ್ನಾಟಕ ರಾಜ್ಯದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ ಅತ್ಯವಶ್ಯವಾದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶೆಟ್ಟಿ ಮೂಲಕ ಮನವಿ ಸಲ್ಲಿಸಲಾಯಿತು. ವಿವಿಧ ಬೇಡಿಕೆಗಳಾದ ನಗದುರಹಿತ ಆರೋಗ್ಯ ಭಾಗ್ಯ” ಅಂದರೆ “ಸಂಧ್ಯಾಕಿರಣ” ಯೋಜನೆಯನ್ನು ರಾಜ್ಯದ ನಿವೃತ್ತ ಸರಕಾರಿ ನೌಕರರಿಗೂ ಅನ್ವಯಿಸುವಂತೆ ಜಾರಿಗೊಳಿಸುವುದು, 7ನೇ ವೇತನ ಆಯೋಗದ ಶಿಫಾರಸ್ಸಿನಂತೆ 70 ವರ್ಷ ವಯೋಮಾನದ ನಿವೃತ್ತ ನೌಕರರಿಗೆ ಶೇ.10 ರಷ್ಟು ವೇತನ ಹೆಚ್ಚಿಸಿ ಆದೇಶಿಸುವುದು, ಮಾನ್ಯ ಘನತೆವೆತ್ತ ನ್ಯಾಯಾಲಯಗಳ ತೀರ್ಪುಗಳಂತೆ 10 ವರ್ಷ 8 ತಿಂಗಳ ಅವಧಿಗೆ ಕಮ್ಯೂಟೇಷನ್ ಹಣದ ಕಟಾವು ಮಾಡುವುದನ್ನು ನಿಲ್ಲಿಸುವುದು, 7ನೇ ವೇತನ ಆಯೋಗದ ಶಿಫಾರಸ್ಸನಂತೆ ದಿನಾಂಕ 01.07.2022 ರಿಂದ 31.07.20245 ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಆರ್ಥಿಕ ನಷ್ಟ ಉಂಟಾಗಿದೆ. ಕಾರಣ ಈ ಅವಧಿಯ ಮೊದಲ ಮತ್ತು ನಂತರದಲ್ಲಿ ನಿವೃತ್ತರಾದ ನೌಕರರಿಗೆ ಸಿಗಬಹುದಾದ DCRG, CVP, EL Encashment Benefit ಗಳನ್ನು ಅನ್ವಯಿಸುವಂತೆ ಮಂಜೂರಿಸಿ ಆದೇಶಿಸುವಂತೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಅಮರೇಶಪ್ಪ ಹೂನೂರ, ಸಿದ್ರಾಮಪ್ಪ ಕಾಡಲೂರ್, ಶರಣಬಸವರಾಜ ನಾಡಗೌಡ, ಜಯಸಿಂಗ್ ಠಾಕೂರ, ಹಾಜಿಮಲಂಗ ಬಾಬಾ, ಹನಮಂತಪ್ಪ ಮೇಟಿ, ಯಲ್ಲಪ್ಪ, ಹಾಜಿಬಾಬು, ಮೆಹಬೂಬ್ ಬೇಗ, ಶಿವರಾಜ್, ಚಂದ್ರಶೇಖರ್, ಶಿವಪುತ್ರಪ್ಪ ಬೆಳ್ಳಿಗನೂರ, ಶರಣಪ್ಪ ಕಗ್ಗಲ, ಕುಮಾರಸ್ವಾಮಿ, ಶಾಂತಾಬಾಯಿ, ಗೀತಾ ಹಾಗೂ ನೂರಾರು ನಿವೃತ್ತ ನೌಕರರು ಭಾಗವಹಿಸಿದ್ದರು.


