ಲಿಂಗಸ್ಗೂರು: ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಹನುಮಂತ ನಾಯಕ ಸಂಪಾದಕ 9739109997
ಲಿಂಗಸ್ಗೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರಿಗೆ ಮಂಗಳವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಪತ್ರಿಕೆ ಭವನದಲ್ಲಿ ಜರುಗಿದ ಶಿಬಿರವನ್ನು ಬೆಂಗಳೂರಿನ ವೈದೇಹಿ ಆಸ್ಪತ್ರೆಯ ಡಾ. ಮಲ್ಲಿಕಾರ್ಜುನ ಹಚ್ಚೊಳ್ಳಿ ಮಾತನಾಡಿ
ಹಸಿದವನಿಗೆ ಗೊತ್ತು ಅನ್ನದ ಬೆಲೆ ರೋಗಿಗಳಿಗೆ ಗೊತ್ತು ಅವರ ಚಿಕಿತ್ಸೆಯ ಬೆಲೆ ಎನ್ನುವಂತೆ ಆಗಿದೆ. ಇಂದಿನ ಕಾಲದಲ್ಲಿ ನೀವು ಆರೋಗ್ಯ ಲೆಕ್ಕಿಸದೆ ನಿಮ್ಮ ಪತ್ರಿಕೆ ಸೇವೆಯಲ್ಲಿ ಕೆಲಸ ಮಾಡುತ್ತಿರೀ ಆದರೆ ಅರೋಗ್ಯ ಕೈಕೊಟ್ಟಾಗ ತುಂಬಾ ಸಮಸ್ಯೆಯಾಗುತ್ತದೆ. ಇತ್ತೀಚೆಗೆ ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯಾಘಾತದಂತಹ ರೋಗಗಳು ಹೆಚ್ಚುತ್ತಿವೆ. ಇಂದಿನ ದಿನಗಳಲ್ಲಿ ಸಣ್ಣ ಮಗುವಿನಿಂದ ಹಿಡಿದು ದೊಡ್ಡವರಿಗೂ ರೋಗಗಳು ಬರುತ್ತಿವೆ. ಆದ್ದರಿಂದ ನೀವು ಆರೋಗ್ಯದತ್ತ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ನಿಮಗೆ ಕಿಡ್ನಿ, ಬೆನ್ನು ಮೊಳೆ, ಕ್ಯಾನ್ಸರ್, ಕಣ್ಣಿನ ತೊಂದರೆ ಇದ್ರೆ ಯಶಸ್ವಿನಿ ಕಾರ್ಡ್ ಇದ್ದರೆ ನಿಮಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡುತ್ತೇವೆ ಎಂದರು. ಈ ವೇಳೆ ಡಾ.ರುದ್ರಗೌಡ ಪಾಟೀಲ್ ಲಿಂಗಸ್ಗೂರು ಮಾತನಾಡಿದರು. ಈ ಸಂದರ್ಭದಲ್ಲಿ ಡಾ. ಅಲ್ಲಮಪ್ರಭು ಸಾಹುಕಾರ, ಡಾ.ಮಣಿ ಶಂಕರ್, ಡಾ.ಪ್ರಜ್ವಲ್, ಡಾ.ರಕ್ಷತ್, ಡಾ. ಸುರೇಶ್, ಡಾ. ಅಭಿಜಿತ್, ಡಾ. ಸ್ವೇತಾ ನಡುವಿನ ಮನೆ, ಪತ್ರಕರ್ತರ ಸಂಘದ ಅಧ್ಯಕ್ಷ ಗುರುರಾಜ ಗೌಡೂರು ಸೇರಿದಂತೆ ಸಂಘದ ಸದಸ್ಯರು ಸೇರಿದಂತೆ ಅದ್ವೀಕ್ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.



