Uncategorized

ಕುಡಿಯುವ ನೀರಿಗಾಗಿ ಮುದಗಲ್ ನಿಂದ ಹಟ್ಟಿ ಪಟ್ಟಣಕ್ಕೆ ಪಾದಯಾತ್ರೆ; ನಯೀಮ್

ಹನುಮಂತ ನಾಯಕ ಸಂಪಾದಕರು.    -9739109997

ಮುದಗಲ್: ಸ್ಥಳೀಯ ಪುರಸಭೆ ಪಟ್ಟಣ ಮುಖಾಂತರ ಹಟ್ಟಿ ಪಟ್ಟಣಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸ್ವಾಭಿಮಾನ ಸೇನೆ ಸಂಘಟನೆ ವತಿಯಿಂದ ಪಾದಯಾತ್ರೆ ಮಾಡಲಾಗುತ್ತದೆ ಎಂದು ಕರವೇ ಅಧ್ಯಕ್ಷ ಎಸ್ ಎ ನಯಿಂ ಹೇಳಿದರು. ಪಟ್ಟಣದ ಪತ್ರಿಕೆ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಾವು18 ವರ್ಷಗಳಿಂದ ಸಂಘಟನೆ ಮೂಲಕ ಐತಿಹಾಸಿಕ ಮುದಗಲ್ ಪಟ್ಟಣ ತಾಲೂಕನ್ನಾಗಿ ಘೋಷಣೆ ಮಾಡುವಂತೆ. ಹಾಗೂ ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ ಹಾಗೂ ಮೇ 13 ರಂದು ಮುದಗಲ್ ಪಟ್ಟಣವನ್ನು ಕೂಡ ಸಂಪೂರ್ಣ ಬಂದ್ ಮಾಡಲಾಗಿತ್ತು. ಆದರೆ ಇದುವರೆಗೂ ಪಟ್ಟಣವನ್ನು ತಾಲೂಕನ್ನಾಗಿ ಮಾಡುತ್ತಿಲ್ಲ.

ಇದೇ ಆಗಸ್ಟ್ 6 ರಂದು ಹಟ್ಟಿ ಪಟ್ಟಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಆಗಮಿಸುತ್ತಿರುವುದುರಿಂದ. ನಮ್ಮ
ಐತಿಹಾಸಿಕ ಪಟ್ಟಣಕ್ಕೆ 10 ದಿನಕ್ಕೊಮ್ಮೆ ಕುಡಿಯುವ ನೀರು ಬರುತ್ತಿದ್ದು ಆದ್ದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸುವಂತೆ ಅಗಸ್ಟ್ 5 ರಂದು ಮುದಗಲ್ ಪಟ್ಟಣದ ಪುರಸಭೆ ಮುಂಭಾಗದಿಂದ ಹಟ್ಟಿ ಪಟ್ಟಣಕ್ಕೆ ಪಾದಯಾತ್ರೆ ಮಾಡುತ್ತಿದ್ದೇವೆ. ಈ ಪಾದಯಾತ್ರೆಯಲ್ಲಿ ಮುದಗಲ್ ನಾ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಆಗಮಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಎಸ್ ಎ ನಯೀಮ್, ಸಂತೋಷ ಕುಮಾರ್, ಸಾಬು ಹುಸೇನ್, ಎಸ್ ಎನ್ ಖಾದ್ರಿ, ಭೀಮಣ್ಣ ಉಪ್ಪಾರ, ಅಬ್ದುಲ್ ಮಜೀದ್, ಮಹಾಂತೇಶ ಚಟ್ಟರ್ ಸೇರಿದಂತೆ ಇನ್ನಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button