Uncategorized
ಪುರಸಭೆಯಲ್ಲಿ ವಿಶ್ವಕರ್ಮ ಅವರ ಜಯಂತಿ ಆಚರಣೆ

ಹನುಮಂತ ನಾಯಕ ಸಂಪಾದಕ. 9739109997
ಮುದಗಲ್ : ಸ್ಥಳೀಯ ಪುರಸಭೆಯಲ್ಲಿ ಶ್ರೀ ವಿಶ್ವಕರ್ಮ ಅವರ ಜಯಂತಿಯನ್ನು ಆಚರಿಸಲಾಯಿತು. ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಸಮಾಜದ ಮುಖಂಡರಾದ ನಾರಾಯಣಪ್ಪ ಪತ್ತಾರ್ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಪ್ರವೀಣ್ ಬೋಗರ್, ಉಪಾಧ್ಯಕ್ಷ ಎಸ್ ಕೆ ಅಜ್ಮೀರ್ ಬೆಳ್ಳಿಕಟ್, ಹಿಂದುಳಿದ ವರ್ಗದ ಕಾರ್ಯದರ್ಶಿ ತಮ್ಮಣ್ಣ ಗುತ್ತೆದಾರ್, ಶ್ರೀಧರ್ ಪತ್ತಾರ್, ಕಾಂತಕುಮಾರ್ ಪತ್ತಾರ್, ಉದಯಕುಮಾರ್ ಪತ್ತಾರ್, ನಾರಾಯಣಪ್ಪ ಪತ್ತಾರ್, ಶ್ರಿಶೈಲಪ್ಪ ಪತ್ತಾರ್, ನಿಲಪ್ಪ ಕಂಬಾರ, ಮಾನಪ್ಪ ಪತ್ತಾರ್ ಸೇರಿದಂತೆ ವಿಶ್ವಕರ್ಮ ಸಮಾಜ ಬಾಂಧವರು ಉಪಸ್ಥಿತರಿದ್ದರು.



