Uncategorized

ನಾಳೆಯಿಂದ ಲಿಂಗಸ್ಗೂರಿನಲ್ಲಿ ಲೆದರ್ ಬಾಲ್ ಕ್ರಿಕೆಟ್ ಪ್ರಾರಂಭ

ಹನುಮಂತ ನಾಯಕ ಸಂಪಾದಕ.        9739109997

ಕ್ರಿಕೆಟ್ ಕಲಿಯಲು ಆಸಕ್ತಿ ಅಭ್ಯರ್ಥಿಗಳಿಗಾಗಿ ಬೇಸಿಗೆ ಶಿಬಿರ; ಕಾರ್ತಿಕ್ ನಾಯಕ

ಲಿಂಗಸ್ಗೂರು: ಪಟ್ಟಣದಲ್ಲಿ ನಾಳೆಯಿಂದ ಲೆದರ್ ಬಾಲ್ ಕ್ರಿಕೆಟ್ ಕಲಿಯಲು ಆಸಕ್ತಿ ಅಭ್ಯರ್ಥಿಗಳಿಗಾಗಿ ರೈಸಿಂಗ್ ಸ್ಟಾರ್ ಕ್ರಿಕೆಟ್ ಅಕಾಡೆಮಿ ವತಿಯಿಂದ ಬೇಸಿಗೆ ಶಿಬಿರ ಮತ್ತು ಖಾಯಂ ತರಬೇತಿಯನ್ನು ನಾಳೆ ರವಿವಾರದಿಂದ ಹೊಸ ಬಸ್ಟ್ಯಾಂಡ್ ಹತ್ತಿರ ಎಸ್.ಎಲ್.ವಿ ಲಾಡ್ಜ್ ಹಿಂದುಗಡೆ ನಿರ್ಮಿಸಲಾದ ಸುಸಜ್ಜಿತ ನೆಟ್ ಗಳಲ್ಲಿ ತರಬೇತಿ ಕೇಂದ್ರವನ್ನು ಆರಂಭಿಸಲಾಗುತ್ತಿದೆ ಎಂದು ಕಾರ್ತಿಕ್ ನಾಯಕ್ ಪತ್ರಿಕೆಗೆ ತಿಳಿಸಿದ್ದಾರೆ. ಜಿಲ್ಲಾ ಮತ್ತು ರಾಜ್ಯ ಮಟ್ಟದ ಕ್ರಿಕೆಟಿಗೆ ಆಟಗಾರರನ್ನು ಸಿದ್ಧಪಡಿಸುವುದು. ಹಾಗೂ ವೃತ್ತಿಪರ ತರಬೇತಿ ಹಾಗೂ ವೈಯಕ್ತಿಕ ಗಮನ ದೊಂದಿಗೆ ಯುವ ಪ್ರತಿಭೆಗಳನ್ನು ಬೆಳೆಸುವುದು. ಆರು ವರ್ಷ ಮೇಲ್ಪಟ್ಟ ಯುವಕ ಯುವತಿಯರಿಗೆ ಈ ಕ್ರೀಡಾ ತರಬೇತಿ ಪಡೆಯಲು ಅವಕಾಶವಿದ್ದು. ಬ್ಯಾಟಿಂಗ್, ಬೌಲಿಂಗ್, ಕೀಪಿಂಗ್ ಸೇರಿದಂತೆ ಕ್ರಿಕೆಟ್ ನ ಎಲ್ಲಾ ಪ್ರಕಾರಗಳಲ್ಲೂ ಸೂಕ್ತ ತರಬೇತಿ ಒದಗಿಸಲಾಗುತ್ತದೆ. ಈಗಾಗಲೇ ಕ್ರಿಕೆಟ್ ನೆಟ್ಸ್ (ಮ್ಯಾಟಿಂಗ್, ಅ್ಯಸ್ಟ್ರೋ) ಪಿಚ್, ನೆಟ್ ಸಿದ್ಧಗೊಂಡಿದ್ದು ಮಕ್ಕಳ ತರಬೇತಿಗೆ ಮುಖ್ಯವಾಗಿವೆ.
ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಆಟಗಾರನಾಗಿ ಹೆಸರು ಮಾಡಿದ ಕಾರ್ತಿಕ್ ನಾಯಕ ಈ ಅಕಾಡೆಮಿಯ ಸಂಚಾಲಕರಾಗಿ ಮತ್ತು ತರಬೇತಿದಾರರಾಗಿದ್ದು ಆದಷ್ಟು ಬೇಗನೆ ಪಾಲಕರು ತಮ್ಮ ಮಕ್ಕಳಿಗೆ ಪ್ರವೇಶ ಕೊಡಿಸಿ ಈ ರಜಾ ಸಮಯದ ಸದುಪಯೋಗ ಪಡೆದು ಮಕ್ಕಳು ಅಗತ್ಯ ಕ್ರೀಡಾ ಕೌಶಲ್ಯ ಪಡೆಯಲು ಅನುಕೂಲ ಮಾಡಿಕೊಡಬೇಕಾಗಿದೆ. ಈ ತರಬೇತಿಯಲ್ಲಿ
ಶುದ್ಧ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಇದ್ದು, ಮಕ್ಕಳು ಸ್ವಂತದಾದ ಕ್ರಿಕೆಟ್ ಕಿಟ್ ಹೊಂದಿರುವುದು ಕಡ್ಡಾಯವಾಗಿದೆ.
ವಾರಾಂತ್ಯಕ್ಕೆ ಸ್ನೇಹಮಯ ಪಂದ್ಯಗಳನ್ನು , ಟೂರ್ನಮೆಂಟ್ ಆಯೋಜನೆ ಆದರೆ ಅಕಾಡೆಮಿಯ ತಂಡದಲ್ಲಿ ಸೂಕ್ತ ಪ್ರತಿಭೆಗಳನ್ನು ಆಡಿಸಲಾಗುತ್ತದೆ. ಈ ತರಬೇತಿಯು ಇಂದಿನಿಂದ ಸಮಯ ಬೆಳಿಗ್ಗೆ 6:30 ರಿಂದ 8:30 ರವರೆಗೆ ಇದ್ದು ಸಾಯಂಕಾಲ 4:00 ಗಂಟೆಯಿಂದ ಸಾಯಂಕಾಲ 6:30 ರವರೆಗೆ ಇರುತ್ತದೆ ಎಂದು ಪತ್ರಿಕೆ ತಿಳಿಸಿದ್ದರು. ಕಾರ್ತಿಕ್ ನಾಯಕ ಎನ್ನುವ ಯುವಕ
ಅತಿ ಚಿಕ್ಕ ವಯಸ್ಸಿನಲ್ಲಿ ರಾಷ್ಟ್ರ ರಾಜ್ಯದಲ್ಲಿ ಅತ್ಯುತ್ತಮ ಸಾಧನೆ ಮಾಡಿ ಸ್ವಂತ ಊರಿನಲ್ಲಿ ಬೇಸಿಗೆ ಶಿಬಿರ ಹಾಗೂ ಖಾಯಂ ತರಬೇತಿ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಇಂತಹ ಯುವಕರು ಈ ಭಾಗದಲ್ಲಿ ಇನಿಷ್ಟು ಬರಬೇಕು ಬೆಳೆಯಬೇಕು ಎನ್ನುವುದು ಸಾರ್ವಜನಿಕರ ಆಶಯವಾಗಿದೆ.

(ನಾನು ಈಗಾಗಲೇ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಶಾಲಾ ಆಟಗಳಲ್ಲಿ ಭಾಗವಹಿಸಿದ್ದೇನೆ. ರಾಯಚೂರು ಜಿಲ್ಲೆಯಲ್ಲಿ ಪ್ರಥಮ ವಿಭಾಗದಲ್ಲಿ ಹಾಗೂ ಬೆಂಗಳೂರಿನಲ್ಲಿ ದ್ವಿತೀಯ ವಿಭಾಗದಲ್ಲಿ ಬಂದಿದ್ದು. ಹಾಗೂ KSCAಯಲ್ಲಿ ರಾಜ್ಯ ಸಂಭಾವ್ಯದಲ್ಲಿ ಕಾರ್ಯನಿರ್ವಾಸುದ್ದೇನೆ ಎಂದು –
ಕಾರ್ತಿಕ್ ನಾಯಕ್ ತರಬೇತುದಾರರು
ರೈಸಿಂಗ್ ಸ್ಟಾರ್ ಕ್ರಿಕೆಟ್ ಅಕಾಡೆಮಿ ಲಿಂಗಸ್ಗೂರು.
ಮೊ: 9632262762)

Hanumanth Nayaka

ಹನುಮಂತ ನಾಯಕ ಮಟ್ಟೂರಿನ ಸಾಂಸ್ಕೃತಿಕ ಪರಂಪರೆ ಮತ್ತು ಸಮಾಜಮುಖಿ ಚಟುವಟಿಕೆಗಳಿಗೆ ಶಕ್ತಿ ತುಂಬುತ್ತಿರುವ ಪ್ರಮುಖ ವ್ಯಕ್ತಿಗಳಲ್ಲೊಬ್ಬರಾದ ಹನುಮಂತ ನಾಯಕರು, “ಕಲ್ಯಾಣ ವೈಭವ” ಪತ್ರಿಕೆಯ ಗೌರವಾನ್ವಿತ ಸಂಪಾದಕರಾಗಿದ್ದಾರೆ. ಸಮೂಹ ಸೇವೆ, ಮಾಹಿತಿ ಹಂಚಿಕೆ ಮತ್ತು ಗ್ರಾಮೀಣ ಅಭ್ಯುದಯದ ಬಗ್ಗೆ ಅವರಿಗಿರುವ ಗಾಢ ಬದ್ಧತೆ ಅವರಿಗೆ ವಿಶಿಷ್ಟ ಗುರುತನ್ನು ತಂದಿದೆ. ಸಮಾಜದ ಪ್ರತಿಯೊಂದು ಮುಖ್ಯ ಕ್ಷಣ—ಮದುವೆ ಸಮಾರಂಭಗಳು, ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭಾವಂತರ ಸಾಧನೆಗಳು ಮತ್ತು ಗ್ರಾಮಾಭಿವೃದ್ಧಿ ಚಟುವಟಿಕೆಗಳನ್ನು ನಿಖರವಾಗಿ ದಾಖಲಿಸಿ ಜನತೆಗೆ ತಲುಪಿಸುವುದು ಅವರ ಮುಖ್ಯ ಧ್ಯೇಯ. ಅವರ ಸಂಪಾದಕೀಯ ಶೈಲಿ ಸ್ಪಷ್ಟ, ಜವಾಬ್ದಾರಿಯುತ ಮತ್ತು ಓದುಗರನ್ನು ಜತೆಗೇ ಸಾಗಿಸುವಂತಿದೆ. ಮಟ್ಟೂರು ಪ್ರದೇಶದಲ್ಲಿ ನಂಬಿಕೆ, ನಿಷ್ಠೆ ಮತ್ತು ಸೇವಾಭಾವನೆಗೆ ಪ್ರತೀಕವಾಗಿ ಗುರುತಿಸಿಕೊಂಡಿರುವ ಹನುಮಂತ ನಾಯಕರವರು, ತಮ್ಮ ಮಾಧ್ಯಮದ ಮೂಲಕ ಸಮಾಜದ ಒಗ್ಗಟ್ಟು, ಸಂಸ್ಕೃತಿ ಸಂರಕ್ಷಣೆ ಮತ್ತು ಜನಜಾಗೃತಿ ಮೂಡಿಸುವ ಪ್ರಯತ್ನಗಳಲ್ಲಿ ಸದಾ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಗ್ರಾಮದ ಅಭಿವೃದ್ದಿಗಾಗಿ ತಮ್ಮ ಜ್ಞಾನ, ಸಮಯ ಮತ್ತು ಶ್ರಮವನ್ನು ವಿನಯದಿಂದ ಹೂಡುತ್ತಿರುವ ಅವರ ಕೆಲಸವು ಮಟ್ಟುರು ಸಮುದಾಯಕ್ಕೆ ಅಮೂಲ್ಯ ಕೊಡುಗೆಯಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!