Uncategorized

ಲಿಂಗಸಗೂರು ತಾಲೂಕಿನಾದ್ಯಂತ ಹಾಡುಹಗಲೆ ಇಸ್ಪೀಟ್ ಜೂಜಾಟ ; ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಹನುಮಂತ ನಾಯಕ ಸಂಪಾದಕ.     9739109997

ಲಿಂಗಸಗೂರು: ತಾಲೂಕಿನಾದ್ಯಂತ ಇಸ್ಪೀಟ್ ಜೂಜಾಟ್ ವಿಪರೀತವಾಗಿದ್ದು ಇದರಿಂದ ಹಲವಾರು ಬಡ ಕುಟುಂಬಗಳು ದಿನದಿಂದ ದಿನಕ್ಕೆ ಹಾಳಾಗುತಿದ್ದು ಇಸ್ಪೀಟ್ ಆಗಿರುವವರು ಗಂಡಗಾಗುತ್ತಿದ್ದರೆ ಹಲವಾರು ಜನ ಜೂಜಾಟಕ್ಕೆ ಬಿದ್ದು ತೊಂದರೆ ಅನುಭವಿಸುತ್ತಿದ್ದಾರೆ. ಹೌದು ಇದು ಲಿಂಗಸ್ಗೂರು ತಾಲೂಕಿನ್ಯಾದಂತೆ ದಿನನಿತ್ಯ ಜೋರಾಗಿದ್ದು ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿಕೊಂಡು ಇದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಲಿಂಗಸ್ಗೂರು ತಾಲೂಕಿನ ಹಲವಾರು ಭಾಗದಲ್ಲಿ ಇಸ್ಪೀಟ್ ಜೂಜಾಟ ಎಗ್ಗಿಲ್ಲದೆ ನಡೆಯುತ್ತಿವೆ ಎನ್ನುವ ಸುದ್ದಿಗಳು ಮೇಲಿಂದ ಮೇಲೆ ಕೇಳಿಬರುತಿದ್ದು ಅವುಗಳಿಗೆ ಕಡಿವಾಣ ಇಲ್ಲದಂತಾಗಿದೆ. ಮುದಗಲ್ ಪಟ್ಟಣ ವ್ಯಾಪ್ತಿಯ
ಛತ್ತರ ಗ್ರಾಮದ ಹೊರವಲಯದಲ್ಲಿ ಹಾಡುಹಗಲೇ ಯಾರ ಭಯವಿಲ್ಲದೆ ಲಕ್ಷಾಂತರ ರೂಪಾಯಿ ಹಣ ಜೂಜಿಗೆ ಹಾಕಿ ಇಸ್ಪೀಟ್ ಆಟ ಆಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಲೊಕೇಷನ್ ಸಹಿತ ಹರಿದಾಡುತ್ತಿದೆ ನಾಗಲಾಪುರ ಭಾಗದಲ್ಲಿ ಛತ್ತರ, ಮೇಗಳಪೇಟೆ, ಗೊರೇಬಾಳ, ಭಾಗದಲ್ಲಿ ಹೀಗೆ ನಾನಾ ಕಡೆಯಲ್ಲಿ ಹಾಡುಹಗಲೆ ಜೂಜಾಟ ನಡೆಯುತಿದ್ದು ಅಲ್ಲಿಗೆ ಜಿಲ್ಲೆ ಹಾಗೂ ಹೊರಜಿಲ್ಲೆಯಿಂದ ಆಟಗಾರರು ಬರುತ್ತಾರೆ ಎನ್ನಲಾಗುತ್ತಿದೆ
ಲಿಂಗಸಗೂರು ಪಟ್ಟಣದಲ್ಲಿಯು ಕ್ಲಬ್ ಹೆಸರಿನಲ್ಲಿಯೆ ಜೂಜಾಟ ಆಡಲಾಗುತ್ತಿದೆ ಎನ್ನಲಾಗುತ್ತಿದ್ದು ಕ್ಲಬ್ ನ ನಿಯಮಗಳನ್ನು ಗಾಳಿಗೆ ತೂರಿ ಇಲ್ಲಿ ಜೂಜಾಟ ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಜೂಜಾಟ ಆಡುವುದರಿಂದ ಹಲವಾರು ಜನ ಸಾಲದ ಶೂಲಕ್ಕೆ ಸಿಲುಕಿ ತೊಂದರೆ ಅನುಭವಿಸುತ್ತಾರೆ ಆದರೆ ಆಡಿಸುವ ಆಟಗಾರರು ಮಾತ್ರ ದುಂಡಗಾಗುತ್ತಿದ್ದಾರೆ ಎನ್ನಲಾಗುತ್ತಿದ್ದು ಇದನ್ನು ಮಟ್ಟಹಾಕುವವರಾರು ಎನ್ನುವಂತಾಗಿದೆ. ಇನ್ನು ಅಧಿಕಾರಿಗಳು ಮಾತ್ರ ಕಣ್ಣಿದ್ದು ಕುರುಡರಂತೆ ಇದ್ದಾರೆ ಇನ್ನು ಮುಂದಾದರು ಕಡಿವಾಣ ಹಾಕಬಹುದೇ ಕಾದುನೋಡಬೇಕಾಗಿದೆ.

Hanumanth Nayaka

ಹನುಮಂತ ನಾಯಕ ಮಟ್ಟೂರಿನ ಸಾಂಸ್ಕೃತಿಕ ಪರಂಪರೆ ಮತ್ತು ಸಮಾಜಮುಖಿ ಚಟುವಟಿಕೆಗಳಿಗೆ ಶಕ್ತಿ ತುಂಬುತ್ತಿರುವ ಪ್ರಮುಖ ವ್ಯಕ್ತಿಗಳಲ್ಲೊಬ್ಬರಾದ ಹನುಮಂತ ನಾಯಕರು, “ಕಲ್ಯಾಣ ವೈಭವ” ಪತ್ರಿಕೆಯ ಗೌರವಾನ್ವಿತ ಸಂಪಾದಕರಾಗಿದ್ದಾರೆ. ಸಮೂಹ ಸೇವೆ, ಮಾಹಿತಿ ಹಂಚಿಕೆ ಮತ್ತು ಗ್ರಾಮೀಣ ಅಭ್ಯುದಯದ ಬಗ್ಗೆ ಅವರಿಗಿರುವ ಗಾಢ ಬದ್ಧತೆ ಅವರಿಗೆ ವಿಶಿಷ್ಟ ಗುರುತನ್ನು ತಂದಿದೆ. ಸಮಾಜದ ಪ್ರತಿಯೊಂದು ಮುಖ್ಯ ಕ್ಷಣ—ಮದುವೆ ಸಮಾರಂಭಗಳು, ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭಾವಂತರ ಸಾಧನೆಗಳು ಮತ್ತು ಗ್ರಾಮಾಭಿವೃದ್ಧಿ ಚಟುವಟಿಕೆಗಳನ್ನು ನಿಖರವಾಗಿ ದಾಖಲಿಸಿ ಜನತೆಗೆ ತಲುಪಿಸುವುದು ಅವರ ಮುಖ್ಯ ಧ್ಯೇಯ. ಅವರ ಸಂಪಾದಕೀಯ ಶೈಲಿ ಸ್ಪಷ್ಟ, ಜವಾಬ್ದಾರಿಯುತ ಮತ್ತು ಓದುಗರನ್ನು ಜತೆಗೇ ಸಾಗಿಸುವಂತಿದೆ. ಮಟ್ಟೂರು ಪ್ರದೇಶದಲ್ಲಿ ನಂಬಿಕೆ, ನಿಷ್ಠೆ ಮತ್ತು ಸೇವಾಭಾವನೆಗೆ ಪ್ರತೀಕವಾಗಿ ಗುರುತಿಸಿಕೊಂಡಿರುವ ಹನುಮಂತ ನಾಯಕರವರು, ತಮ್ಮ ಮಾಧ್ಯಮದ ಮೂಲಕ ಸಮಾಜದ ಒಗ್ಗಟ್ಟು, ಸಂಸ್ಕೃತಿ ಸಂರಕ್ಷಣೆ ಮತ್ತು ಜನಜಾಗೃತಿ ಮೂಡಿಸುವ ಪ್ರಯತ್ನಗಳಲ್ಲಿ ಸದಾ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಗ್ರಾಮದ ಅಭಿವೃದ್ದಿಗಾಗಿ ತಮ್ಮ ಜ್ಞಾನ, ಸಮಯ ಮತ್ತು ಶ್ರಮವನ್ನು ವಿನಯದಿಂದ ಹೂಡುತ್ತಿರುವ ಅವರ ಕೆಲಸವು ಮಟ್ಟುರು ಸಮುದಾಯಕ್ಕೆ ಅಮೂಲ್ಯ ಕೊಡುಗೆಯಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!