Uncategorized

ಮುದಗಲ್; ಮರಬಿದ್ದು ದಂಪತಿಗಳಿಬ್ಬರ ಸಾವು,ಪರಿಹಾರ ನೀಡಲು ಒತ್ತಾಯ

ಹನುಮಂತ ನಾಯಕ ಸಂಪಾದಕರು -9739109997

ಮುದಗಲ್ : ಕಳೆದರೆಡು ದಿನಗಳ ಹಿಂದೆ ಮಸ್ಕಿ ರಸ್ತೆಗೆ ಹೊಂದಿಕೊಂಡಿರುವ ಮದರ್ ತೇರೆಸಾ ಶಾಲೆಯ ಹತ್ತಿರ ಮರಬಿದ್ದು ದಂಪತಿಗಳಿಬ್ಬರ ಕುಟುಂಭಸ್ಥರಿಗೆ 1 ಕೋಟಿ ಪರಿಹಾರ ಧನ ನೀಡಿ ದುರ್ಘಟನೆಯಲ್ಲಿ ಬದುಕುಳಿದ 3 ವರ್ಷದ ಮಗುವಿನ ಭವಿಷ್ಯಕ್ಕೆ ರೂಪೂರೇಷ ನೀಡುವಂತೆ ಎಸ್.ಡಿ.ಪಿ.ಐ ನ ರಾಯಚೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಫಿ ಖಾಜಿ ಶುಕ್ರವಾರ ಒತ್ತಾಯಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಸ್ತೆ ಬಳಿ ಹಳೆಯ ಮರ ಧರೆಗುರುಳಿದು ಸಾವಿಗೀಡಾಗಿರುವ ಕುಟುಂಬಕ್ಕೆ ಆಸರೆಯಾಗಿದ್ದ ಮಗ, ಸೊಸೆ ಕಳೆದುಕೊಂಡು ಕುಟುಂಬಸ್ಥರು ಕಣ್ಣೀರಲ್ಲಿ ಕೈತೊಳೆಯುವಂತಾಗಿದ್ದು ಕೂಡಲೇ ಸರಕಾರ ಮೃತರ ಕುಟುಂಬಕ್ಕೆ ಪರಿಹಾರ ಧನ ನೀಡಬೇಕು.ಮುದಗಲ್ ಸಮುದಾಯ ಆರೋಗ್ಯ ಕೇಂದ್ರವು ೬೪ ಹಳ್ಳಿಗಳಿಗೆ ಕೇಂದ್ರಬಿಂದುವಾಗಿದ್ದು ಅಂಬ್ಯುಲೆನ್ಸ ಕೊರತೆ ಇದ್ದು ಅಂಬ್ಯುಲೆನ್ಸ ಗಳನ್ನು ನೀಡಿ ಅನುಕೂಲ ಮಾಡುವಂತೆ ಆಗ್ರಹಿಸಿದರು. ಹಾಲಿ ಮತ್ತು ಮಾಜಿ ಶಾಸಕರು ಮೃತರ ಕುಟುಂಬಕ್ಕೆ ಭೇಟಿ ನೀಡಿ ಸೌಜನ್ಯ ತೋರದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಮಸ್ಕಿ ವೃತ್ತದ ಹತ್ತಿರುವ ಇರುವ ಹಳೆಯ ಮರಗಳನ್ನು ತೆರವು ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ನ ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಪಾಷಾ ಕಡ್ಡಿಪುಡಿ, ಕಾರ್ಯದರ್ಶಿ ಅಲೀಫ್ ಜಂಗ್ಲಿ, ಮುದಗಲ್ ಘಟಕಾಧ್ಯಕ್ಷ ಫಾರುಕ್ ಬೇಗ್, ಸದಸ್ಯ ಖಾಸೀಂ ಡೋಯಿ ಇದ್ದರು.

Hanumanth Nayaka

ಹನುಮಂತ ನಾಯಕ ಮಟ್ಟೂರಿನ ಸಾಂಸ್ಕೃತಿಕ ಪರಂಪರೆ ಮತ್ತು ಸಮಾಜಮುಖಿ ಚಟುವಟಿಕೆಗಳಿಗೆ ಶಕ್ತಿ ತುಂಬುತ್ತಿರುವ ಪ್ರಮುಖ ವ್ಯಕ್ತಿಗಳಲ್ಲೊಬ್ಬರಾದ ಹನುಮಂತ ನಾಯಕರು, “ಕಲ್ಯಾಣ ವೈಭವ” ಪತ್ರಿಕೆಯ ಗೌರವಾನ್ವಿತ ಸಂಪಾದಕರಾಗಿದ್ದಾರೆ. ಸಮೂಹ ಸೇವೆ, ಮಾಹಿತಿ ಹಂಚಿಕೆ ಮತ್ತು ಗ್ರಾಮೀಣ ಅಭ್ಯುದಯದ ಬಗ್ಗೆ ಅವರಿಗಿರುವ ಗಾಢ ಬದ್ಧತೆ ಅವರಿಗೆ ವಿಶಿಷ್ಟ ಗುರುತನ್ನು ತಂದಿದೆ. ಸಮಾಜದ ಪ್ರತಿಯೊಂದು ಮುಖ್ಯ ಕ್ಷಣ—ಮದುವೆ ಸಮಾರಂಭಗಳು, ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭಾವಂತರ ಸಾಧನೆಗಳು ಮತ್ತು ಗ್ರಾಮಾಭಿವೃದ್ಧಿ ಚಟುವಟಿಕೆಗಳನ್ನು ನಿಖರವಾಗಿ ದಾಖಲಿಸಿ ಜನತೆಗೆ ತಲುಪಿಸುವುದು ಅವರ ಮುಖ್ಯ ಧ್ಯೇಯ. ಅವರ ಸಂಪಾದಕೀಯ ಶೈಲಿ ಸ್ಪಷ್ಟ, ಜವಾಬ್ದಾರಿಯುತ ಮತ್ತು ಓದುಗರನ್ನು ಜತೆಗೇ ಸಾಗಿಸುವಂತಿದೆ. ಮಟ್ಟೂರು ಪ್ರದೇಶದಲ್ಲಿ ನಂಬಿಕೆ, ನಿಷ್ಠೆ ಮತ್ತು ಸೇವಾಭಾವನೆಗೆ ಪ್ರತೀಕವಾಗಿ ಗುರುತಿಸಿಕೊಂಡಿರುವ ಹನುಮಂತ ನಾಯಕರವರು, ತಮ್ಮ ಮಾಧ್ಯಮದ ಮೂಲಕ ಸಮಾಜದ ಒಗ್ಗಟ್ಟು, ಸಂಸ್ಕೃತಿ ಸಂರಕ್ಷಣೆ ಮತ್ತು ಜನಜಾಗೃತಿ ಮೂಡಿಸುವ ಪ್ರಯತ್ನಗಳಲ್ಲಿ ಸದಾ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಗ್ರಾಮದ ಅಭಿವೃದ್ದಿಗಾಗಿ ತಮ್ಮ ಜ್ಞಾನ, ಸಮಯ ಮತ್ತು ಶ್ರಮವನ್ನು ವಿನಯದಿಂದ ಹೂಡುತ್ತಿರುವ ಅವರ ಕೆಲಸವು ಮಟ್ಟುರು ಸಮುದಾಯಕ್ಕೆ ಅಮೂಲ್ಯ ಕೊಡುಗೆಯಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!