ಮುದಗಲ್; ಮರಬಿದ್ದು ದಂಪತಿಗಳಿಬ್ಬರ ಸಾವು,ಪರಿಹಾರ ನೀಡಲು ಒತ್ತಾಯ

ಹನುಮಂತ ನಾಯಕ ಸಂಪಾದಕರು -9739109997
ಮುದಗಲ್ : ಕಳೆದರೆಡು ದಿನಗಳ ಹಿಂದೆ ಮಸ್ಕಿ ರಸ್ತೆಗೆ ಹೊಂದಿಕೊಂಡಿರುವ ಮದರ್ ತೇರೆಸಾ ಶಾಲೆಯ ಹತ್ತಿರ ಮರಬಿದ್ದು ದಂಪತಿಗಳಿಬ್ಬರ ಕುಟುಂಭಸ್ಥರಿಗೆ 1 ಕೋಟಿ ಪರಿಹಾರ ಧನ ನೀಡಿ ದುರ್ಘಟನೆಯಲ್ಲಿ ಬದುಕುಳಿದ 3 ವರ್ಷದ ಮಗುವಿನ ಭವಿಷ್ಯಕ್ಕೆ ರೂಪೂರೇಷ ನೀಡುವಂತೆ ಎಸ್.ಡಿ.ಪಿ.ಐ ನ ರಾಯಚೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಫಿ ಖಾಜಿ ಶುಕ್ರವಾರ ಒತ್ತಾಯಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಸ್ತೆ ಬಳಿ ಹಳೆಯ ಮರ ಧರೆಗುರುಳಿದು ಸಾವಿಗೀಡಾಗಿರುವ ಕುಟುಂಬಕ್ಕೆ ಆಸರೆಯಾಗಿದ್ದ ಮಗ, ಸೊಸೆ ಕಳೆದುಕೊಂಡು ಕುಟುಂಬಸ್ಥರು ಕಣ್ಣೀರಲ್ಲಿ ಕೈತೊಳೆಯುವಂತಾಗಿದ್ದು ಕೂಡಲೇ ಸರಕಾರ ಮೃತರ ಕುಟುಂಬಕ್ಕೆ ಪರಿಹಾರ ಧನ ನೀಡಬೇಕು.ಮುದಗಲ್ ಸಮುದಾಯ ಆರೋಗ್ಯ ಕೇಂದ್ರವು ೬೪ ಹಳ್ಳಿಗಳಿಗೆ ಕೇಂದ್ರಬಿಂದುವಾಗಿದ್ದು ಅಂಬ್ಯುಲೆನ್ಸ ಕೊರತೆ ಇದ್ದು ಅಂಬ್ಯುಲೆನ್ಸ ಗಳನ್ನು ನೀಡಿ ಅನುಕೂಲ ಮಾಡುವಂತೆ ಆಗ್ರಹಿಸಿದರು. ಹಾಲಿ ಮತ್ತು ಮಾಜಿ ಶಾಸಕರು ಮೃತರ ಕುಟುಂಬಕ್ಕೆ ಭೇಟಿ ನೀಡಿ ಸೌಜನ್ಯ ತೋರದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಮಸ್ಕಿ ವೃತ್ತದ ಹತ್ತಿರುವ ಇರುವ ಹಳೆಯ ಮರಗಳನ್ನು ತೆರವು ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ನ ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಪಾಷಾ ಕಡ್ಡಿಪುಡಿ, ಕಾರ್ಯದರ್ಶಿ ಅಲೀಫ್ ಜಂಗ್ಲಿ, ಮುದಗಲ್ ಘಟಕಾಧ್ಯಕ್ಷ ಫಾರುಕ್ ಬೇಗ್, ಸದಸ್ಯ ಖಾಸೀಂ ಡೋಯಿ ಇದ್ದರು.