ಮುದಗಲ್; ಏಳುಕೋಟಿ ಮೈಲಾರಲಿಂಗೇಶ್ವರ ಸಹಕಾರಿ ಸಂಘದ 2ನೇ ವರ್ಷದ ಸಾಮಾನ್ಯ ಸಭೆ

ಹನುಮಂತ ನಾಯಕ ಸಂಪಾದಕ. 9739109997
ಮುದಗಲ್ :ಶ್ರೀ ಏಳುಕೋಟಿ ಮೈಲಾರಲಿಂಗೇಶ್ವರ ಸೌಹಾರ್ದ ಸಹಕಾರಿ ಸಂಘದ 2ನೇ ವರ್ಷದ ಸಾಮಾನ್ಯ ಸಭೆ ಮುದಗಲ್ ಪಟ್ಟಣದ ಶ್ರೀ ವಿಜಯ ಮಹಾಂತೇಶ ಮಠದಲ್ಲಿ ಬುಧವಾರ ಜರುಗಿತು ಜ್ಯೋತಿ ಬೆಳಗುವ ಮೂಲಕ ಪುರಸಭೆ ಸದಸ್ಯ ಎಸ್, ಆರ್, ರಸೂಲ್ ಕಾರ್ಯಕ್ರಮ ಉದ್ಘಾಟನೆ ಮಾಡಿದರು ಕೆಪಿಸಿಸಿ ಹಿಂದೂಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ತಮ್ಮಣ್ಣ ಗುತ್ತೇದಾರ ಸಹಕಾರಿ ಸಂಘದ ಪಿತಾಮಹ ಸಿದ್ದನಗೌಡ ಪಾಟೀಲ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು ಸಭೆಯಲ್ಲಿ ಪ್ರಾಸ್ತಾವಿಕವಾಗಿ ಶಿಕ್ಷಕ ಸಂಗಮೇಶ ಮಾತನಾಡಿದರು ನಂತರ ಲಿಂಗಸುಗೂರು ತಾಲೂಕ ಪಂಚಾಯತಿ ಕೆಡಿಪಿ ಸದಸ್ಯ ಪರಮೇಶ ಕನ್ನಾಪೂರುಹಟ್ಟಿ ಹಾಗೂ ಸಂಘದ ಅಧ್ಯಕ್ಷ ಹುಚ್ಚರೆಡ್ಡಿ ಮಾತನಾಡಿದರು. ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಅಜ್ಮಿರ್ ಬೆಳ್ಳಿಕಟ್, ಸದಸ್ಯ ಶಿವನಾಗಪ್ಪ ಬಡಕುರಿ,ಮಂಜುನಾಥ ಬನಿಗೋಳ್ಕರ್, ನಾಗರಾಜ ಸುಂಕದ,ಸೈಯದಸಾಬ, ಹುಸೇನ್ ಅಲಿ,ಪರಶುರಾಮ ವಕೀಲರು,ಕೃಷ್ಣ ಚಲುವಾದಿ,ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.



