Uncategorized

ಲಿಂಗಸ್ಗೂರಿನಲ್ಲಿ ಉದ್ಯಾನವನಕ್ಕಾಗಿ ಮೀಸಲಿಟ್ಟ ಜಾಗ ಮಾರಾಟ ; ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ಅಮಾನತ್ತಿಗೆ ಆಗ್ರಹ

ಹನುಮಂತ ನಾಯಕ ಸಂಪಾದಕ.        9739109997

ಲಿಂಗಸೂಗೂರು: ಪಟ್ಟಣದ ವಿವಿಧ ಲೇಔಟ್ಗಳಲ್ಲಿ ಉದ್ಯಾನವನ ನಿರ್ಮಿಸಲು ಜಾಗವನ್ನು ಕಾಯ್ದಿರಿಸಿ ಬೇಕೆಂಬುದು ನಿಯಮವಿದೆ ಆದರೆ ಲೇಔಟ್ ಗಳ ಮಾಲೀಕರು ಹಾಗೂ
ಪಟ್ಟಣದ ವಿವಿಧ ಲೇಔಟ್ ಗಳಲ್ಲಿರುವ ಉದ್ಯಾನವ ಪ್ಲಾಟ್ ಗಳನ್ನಾಗಿ ಪರಿವರ್ತಿಸಿ ಇ- ಖಾತೆ ಮಾಡಿ ಮಾರಾಟ ಮಾಡಲು ಹಾಗೂ ಕಟ್ಟಡ ಕಟ್ಟಲು ಪರವಾನಿಗೆ ನೀಡಿದ ಪುರಸಭೆ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಮಾನತ್ತು ಮಾಡಬೇಕು ಎಂದು ನಮ್ಮ ಕರ್ನಾಟಕ ಸೇನೆ ತಾಲೂಕು ಪದಾಧಿಕಾರಿಗಳು ಒತ್ತಾಯಿಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು. ಪುರಸಭೆ ಅಧಿಕಾರಿಗಳು ಸೇರಿಕೊಂಡು ಯಾವುದೋ ಒಂದು ನಂಬರ್ ನೀಡಿ ಪ್ಲಾಟ್ಗಳನ್ನಾಗಿ ಪರಿವರ್ತಿಸಿ ಇ- ಖಾತೆ ಮಾಡಿ ಮಾರಾಟ ಮಾಡಲಾಗುತ್ತಿದೆ. ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಛೇರಿ ಬಳಿ ಇರುವ ಲೇಔಟ್ನಲ್ಲಿ ಉದ್ಯಾನವನಕ್ಕಾಗಿ ಮೀಸಲಿಟ್ಟ ಜಾಗದಲ್ಲಿ 9 ಪ್ಲಾಟ್ಗಳನ್ನು ಮಾಡಿ ಮಾರಾಟ ಮಾಡಿಲಾಗಿದೆ. ಅಲ್ಲದೇ ಕಟ್ಟಡ ಕಟ್ಟಲು ಸಹ ಪರವಾನಿಗೆಯನ್ನು ನೀಡರುತ್ತಾರೆ. ಅದೇ ರೀತಿ
ಪಟ್ಟಣದ ವಿವಿಧ ಲೇಔಟ್ಗಳಲ್ಲಿ ಇದೇ ರೀತಿಯಾಗಿ ಉದ್ಯಾನವನಕ್ಕೆ ಮೀಸಲಿಟ್ಟ ಜಾಗದಲ್ಲಿ ಪ್ಲಾಟ್ಗಳನ್ನು ಮಾಡಿ ಮಾರಾಟ ಮಾಡಲಾಗಿದೆ. ಈಗಾಗಲೇ ರಸ್ತೆಗಳನ್ನು ಸಹ ಒತ್ತುವರಿ ಮಾಡಿ ಪ್ಲಾಟ್ಗಳನ್ನಾಗಿ ಮಾಡಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಲಾಗಿದೆ. ಈ ಪುರಸಭೆ ವ್ಯಾಪ್ತಿಯ ಲೇಔಟ್ಗಳಲ್ಲಿ ಆನಧಿಕೃತವಾಗಿ ಉದ್ಯಾನವನ ಜಾಗದಲ್ಲಿ ಪ್ಲಾಟ್ಗಳನ್ನು ಮಾಡಿ ಮಾರಾಟ ಮಾಡಲು ಅವಕಾಶ ನೀಡಿರುವ ಪುರಸಭೆ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿಗಳನ್ನು ಕೂಡಲೇ ಆಮಾನತ್ತು ಮಾಡಬೇಕು ಹಾಗೂ ಅತಿಕ್ರಮವಾಗಿ ನಿರ್ಮಿಸಿದ ಕಟ್ಟಡಗಳನ್ನು ತೆರವುಗೊಳಿಸಬೇಕು ಇಲ್ಲವಾದಲ್ಲಿ ತಮ್ಮ ಕಾರ್ಯಾಲಯದ ಮುಂದೆ – ಪ್ರತಿಭಟನೆ ಮಾಡಲಾಗುವುದು ಎಂದು ನಮ್ಮ ಕರ್ನಾಟಕ ಸೇನೆ ತಾಲೂಕ ಘಟಕ ಲಿಂಗಸೂಗೂರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಶಿವರಾಜ್, ನಿರುಪಾದಿ, ಚಂದ್ರಕಾಂತ, ರಮೇಶ ಜಿ ಭೋವಿ, ಬಸವರಾಜ ನಾಯ್ಕ್, ದೇವೇಂದ್ರ ನಾಯಕ, ಶಿವರಾಜ ಆಲಬನೂರು. ಮಹಾಂತಯ್ಯ ಸ್ವಾಮಿ ರಾಜು ಪತ್ತಾರ = ಸಂತೂಷ ಬಜಂತ್ರಿ ಐದನಾಳ ಮಹೇಂದ್ರ ಕುಮಾರ್ ರಮೇಶ ಮೌನೇಶ ರಾಘವೇಂದ್ರ ಕ್ರಿಷ್ಣ ಭೂವಿ ಕಾಸಪ್ಪ ಕಿರಣ ಗುತ್ತಿಗೆದಾರ ಇತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button