Uncategorized
ಮುದಗಲ್; ಪುರಸಭೆ ಮುಖ್ಯಾಧಿಕಾರಿ ಕಚೇರಿಯಲ್ಲಿ ಬೀದಿ ನಾಯಿಗಳದ್ದೇ ದರ್ಬಾರ್

ಹನುಮಂತ ನಾಯಕ ಸಂಪಾದಕರು -9739109997
ಮುದಗಲ್: ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ಕಚೇರಿಯಲ್ಲಿ ಬೀದಿ ನಾಯಿಗಳದ್ದೇ ದರ್ಬಾರ್ ಎನ್ನುವಂತಾಗಿದೆ. ಪುರಸಭೆಗೆ ನೂರಾರು ಜನರು ವಿವಿಧ ಕೆಲಸಕ್ಕೆ ಮುಖ್ಯಾಧಿಕಾರಿ ಕಚೇರಿಗೆ ಬರುತ್ತಾರೆ ಆದರೆ ಮುಖ್ಯಾಧಿಕಾರಿ ಕೊಠಡಿಯಲ್ಲೇ ಅವರ ಚೇರ್ ಬಳಿ ಬೀದಿ ನಾಯಿ ರಾಜಾರೋಷವಾಗಿ ಕುಳಿತಿದ್ದು. ಸಾರ್ವಜನಿಕರು ಭಯದಿಂದ ಹೊರಹೋಗುವ ಪರಿಸ್ಥಿತಿ ಎದುರಾಗಿದೆ. ಇನ್ನು ಪುರಸಭೆ ಕಚೇರಿಯಲ್ಲಿಯಲ್ಲಿಯೇ ಅಷ್ಟೇ ಅಲ್ಲ ಪಟ್ಟಣದಲ್ಲಿ ಕೂಡ ಅನೇಕ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು. ಪಟ್ಟಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಾಲಾ–ಕಾಲೇಜಿಗೆ, ವಯೋವೃದ್ಧರು ವಾಯು ವಿಹಾರಕ್ಕೆ ತೆರಳುವ ವೇಳೆ ನಾಯಿಗಳು ದಾಳಿ ನಡೆಸುತ್ತವೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಪುರಸಭೆ ಕಚೇರಿಯಲ್ಲಿಯೇ ಈ ರೀತಿ ಬೀದಿ ನಾಯಿಗಳು ಇದ್ದು ಪಟ್ಟಣದಲ್ಲಿ ಇರುವ ನಾಯಿಗಳಿಗೆ ಅಧಿಕಾರಿಗಳು ಕಡಿವಾಣ ಹಾಕುತ್ತಾರೆಯೇ ಎಂಬುದು ಕಾದು ನೋಡಬೇಕಿದೆ.