ಮುದಗಲ್; ಬ್ಲಾಕ್ ಕಾಂಗ್ರೆಸ್ ಎಸ್ಸಿ ಹಾಗೂ ಎಸ್ಟಿ ಸೆಲ್ ಪದಾಧಿಕಾರಿಗಳ ಪದಗ್ರಹಣ

ಮುದಗಲ್ : ಮಾಜಿ ಶಾಸಕ ಹೂಲಗೇರಿ ರವರ ನಿವಾಸದಲ್ಲಿ ರವಿವಾರ ಬ್ಲಾಕ್ ಕಾಂಗ್ರೆಸ್ ಎಸ್ಸಿ ಹಾಗೂ ಎಸ್ಟಿ ಸೆಲ್ ಪದಾಧಿಕಾರಿಗಳ ಪದಗ್ರಹಣ ಜರುಗಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರಗೌಡ ಉಪ್ಪಾರನಂದಿಹಾಳ ಮಾತನಾಡಿ ನಾವು ನೀವೆಲ್ಲರೂ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡಿ ಪಕ್ಷ ಅಧಿಕಾರಕ್ಕೆ ತರಲು ಎಲ್ಲಾರೂ ಪ್ರಯತ್ನಿಸಬೇಕು ಎಂದರು. ನಂತರ ಮಾಜಿ ಶಾಸಕ ಡಿ ಎಸ್ ಹುಲಗೇರಿ ಮಾತನಾಡಿ ನಾನು ವಿರೋಧ ಪಕ್ಷದ ಶಾಸಕರಾಗಿದ್ದರು ಕೂಡ ತಾಲೂಕಿಗೆ ಕೋಟ್ಯಾಂತರ ರೂಪಾಯಿ ಅನುದಾನ ತಂದು ಲಿಂಗಸುಗೂರು ತಾಲೂಕ ಅಭಿವೃದ್ಧಿ ಮಾಡುತ್ತಿದ್ದೇನೆ. ಆದರೆ ಇವಗ
ಅಧಿಕಾರದಲ್ಲಿ ಇದ್ದವರು ಮುದಗಲ್ ಪಟ್ಟಣದ ಕುಡಿಯುವ ನೀರು ಸೇರಿದಂತೆ ತಾಲ್ಲೂಕಿನ ಅಭಿವೃದ್ಧಿ ಶ್ರಮಿಸಬೇಕು ನಾನು ಸೋತರು ಜನರ ಸೇವೆ ಮಾಡುತ್ತಿದ್ದೇನೆ ಎಂದು ಹೇಳಿದರು. ಈ ವೇಳೆ ಮುದಗಲ್ ಬ್ಲಾಕ್ ಕಾಂಗ್ರೆಸ್ (ಪರಿಶಿಷ್ಟ ಜಾತಿ) ಘಟಕದ ಅಧ್ಯಕ್ಷರಾಗಿ ಕೃಷ್ಣ ಚಲುವಾದಿ, ಪರಿಶಿಷ್ಟ ಪಂಗಡದ ಅಧ್ಯಕ್ಷರಾಗಿ ಹನುಮೇಶ ನಾಯಕ, ಅಧಿಕಾರಿ ಸ್ವೀಕಾರ ಮಾಡಿದರು. ಇದೆ ವೇಳೆ ಎಪಿಎಂಸಿ ನಾಮ ನಿರ್ದೇಶನ ಸದಸ್ಯರಿಗೆ ಸನ್ಮಾನ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಎಸ್ ಕೆ ಅಜ್ಮಿರ್ ಬೆಳ್ಳಿಕಟ್, ಸದಸ್ಯರಾದ ಮೈಬುಬಸಾಬ ಕಡ್ಡಿಪುಡಿ,ಎಸ್, ಆರ್, ರಸೂಲ್, ಕೆಡಿಪಿ ಸದಸ್ಯ ಪರಮೇಶ ಕನ್ನಾಪೂರುಹಟ್ಟಿ, ಕಂಟೆಪ್ಪಗೌಡ ವ್ಯಾಕರನಾಳ, ಚಂದ್ರಶೇಖರ ನಾಯಕ, ರಾಘವೇಂದ್ರ ಕುದರಿ, ಸಂಗಮೇಶ ನಾಯಕ ಸಂಗಪ್ಪ ಹಿರೇಮನಿ ಸೇರಿದಂತೆ ಮುಂತಾದವರು ಇದ್ದರು.