ರಾಷ್ಟ್ರ ಮಟ್ಟದ ಸಮಾಜ ಸೇವಾ ರತ್ನ ಪ್ರಶಸ್ತಿಗೆ ಸಾಬ ಹುಸೇನ ಆಯ್ಕೆ

ಹನುಮಂತ ನಾಯಕ ಸಂಪಾದಕ. 9739109997
ಮುದಗಲ್ – ಸಮಾಜ ಸೇವಕರಾಗಿ ಹಲವಾರು ಸಮಾಜದ ಕಾರ್ಯ ಹಾಗೂ ಊರಿನ ಮೂಲಭೂತ ಸೌಕರ್ಯಕ್ಕಾಗಿ ಕರ್ನಾಟಕ ರಕ್ಷಣೆ ವೇದಿಕೆ ಸ್ವಾಭಿಮಾನಿ ಸೇನಾ ಸಂಘಟನೆ ಮುಖಾಂತರ ಹೋರಾಟ ಮಾಡಿದ ಶ್ರೀ ಸಾಬ ಹುಸೇನ ಅವರಿಗೆ ರಾಷ್ಟ್ರ ಮಟ್ಟದ ಸಮಾಜ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ
ಪ್ರಸ್ತುತ ಮುದಗಲ್ ಪಟ್ಟಣದಲ್ಲಿ ವಾಸಿಸುತ್ತಿದ್ದು, ಕರವೇ ನಗರ ಘಟಕದ ಅಧ್ಯಕ್ಷರಾಗಿ ಸುಮಾರು ೧೮ ವರ್ಷಗಳಿಂದ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಸಮಾಜಸೇವೆಯಲ್ಲಿ ನಿರತರಾಗಿದ್ದು, ಸಮಾಜಕ್ಕೆ ಮಾದರಿಯಾಗಿದ್ದಾರೆ. ಇವರ ಸಾಮಾಜಿಕ ಚಟುವಟಿಕೆ ಗಳನ್ನು ಪರಿಗಣಿಸಿ ಬೆಳಕು ಸಾಂಸ್ಕೃತಿಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕನ್ನಡ ನಾಡು-ನುಡಿ, ಸಂಗೀತ, ಕಲೆ, ಶಿಕ್ಷಣ ಸಂಘಟನೆ, ಹೀಗೆ ವಿವಿಧ ಲಲಿತ ಕಲಾ ಪ್ರಕಾರ ಗಳಲ್ಲಿನ ಸಾಧಕರನ್ನು ಆಯ್ಕೆ ಮಾಡಲಾಗುತ್ತಿದೆ. ಇವರನ್ನು ಸಾಹಿತ್ಯ, ಸಂಸ್ಥೆಯ ೧೨೦ನೇ ರಾಷ್ಟ್ರಮಟ್ಟದ ಬೆಳಕು ಸಮ್ಮೇಳನ ಕಾರ್ಯಕ್ರಮದಲ್ಲಿ ಸೆ. ೨೧ರಂದು ರಾಯಚೂರು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮAದಿರದಲ್ಲಿ ಜರುಗುತ್ತಿರುವ ರಾಷ್ಟ್ರಮಟ್ಟದ ಬೆಳಕು ಸಮ್ಮೇಳನದಲ್ಲಿ ರಾಷ್ಟ್ರಮಟ್ಟದ ಕಾಯಕ ಕಣ್ಮಣಿ ಪ್ರಶಸ್ತಿ ನೀಡಲಾಗುವುದು ಎಂದು ಬೆಳಕು ಸಂಸ್ಥೆಯ ಸಂಸ್ಥಾಪಕ ಅಣ್ಣಪ್ಪ ಮೇಟಿ ತಿಳಿಸಿದ್ದಾರೆ.



