ಎಂಬಿಬಿಎಸ್ ಪ್ರವೇಶ ಪಡೆದ ಪ್ರತಿಭೆಗೆ ವ್ಯಾಕರನಾಳ ಪಾಟೀಲ್ ಕುಟುಂಬದಿಂದ ಸನ್ಮಾನ

ಹನುಮಂತ ನಾಯಕ ಸಂಪಾದಕ. 9739109997
ಮುದಗಲ್: ಗ್ರಾಮೀಣ ಭಾಗದ ಭಾಗ್ಯವಂತಿ ವಿಧ್ಯಾರ್ಥಿನಿ ಇತ್ತೀಚೆಗೆ ಯಾದಗಿರಿ ಮೆಡಿಕಲ್ ಕಾಲೇಜಿನಲ್ಲಿ ಅಭ್ಯಾಸಿಸಿ ಎಂಬಿಬಿಎಸ್ (ವೈದ್ಯಕೀಯ)ಗೆ ಪ್ರವೇಶ ಪಡೆದ ಬಡ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿನಿಯನ್ನು ವ್ಯಾಕರನಾಳ ಪಾಟೀಲ್ ಅವರ ಕುಟುಂಬದವರು ಸನ್ಮಾನಿಸಿದರು.
ನಂತರ ಮಾತನಾಡಿದ ನಾಗಲಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶರಣಬಸವರಾಜ ಪಾಟೀಲ್ ಕುಮಾರಖೇಡ ಗ್ರಾಮದ ಬಡಕುಟುಂಬದ ರೈತರಾತ ಬಸವರಾಜ ಭಮ್ಮನಾಳ ಗ್ರಾಮದ ವಾಲ್ಮೀಕಿ ಸಮಾಜದ ಯುವತಿ
ಮೆರಿಟ್ ಮೂಲಕ ಎಂಬಿಬಿಎಸ್ ಪ್ರವೇಶ ಪಡೆದಿರುವುದು ಬಾಹಳಷ್ಟು ಸಂತೋಷವಾಗಿದೆ. ಪಾಲಕರಿಗೆ ಶಾಲೆ ಆಡಳಿತ ಮಂಡಳಿಗಷ್ಟೇ ಅಲ್ಲದೆ ಊರಿನ ಜನರಿಗೆ ತುಂಬಾ ಸಂತಸ ತಂದಿದೆ. ಬಡವರ ಮಕ್ಕಳು ಬೆಳೆಯಬೇಕು, ಶಿಕ್ಷಣ ಕಲಿಯಬೇಕಾಗಿದೆ. ಕಷ್ಟ ಪಟ್ಟು ಓದಿದರೆ ಏನಾದರೂ ಸಾಧನೆ ಮಾಡಲು ಸಾಧ್ಯ ಎನ್ನುವುದಕ್ಕೆ ಈ ಯುವತಿಯ ಸಾಕ್ಷಿಯಾಗಿದ್ದಾಳೆ. ನನಗೆ ಒಬ್ಬ ಸಹೋದರಿ ಇದ್ದಳು 30 ವರ್ಷದ ಹಿಂದೆ ತೀರಿಕೊಂಡಳು ಆದ್ದರಿಂದ ನಾನು ಆ ಸ್ಥಾನವನ್ನು ಇಂತಹ ಸಹೋದರಿ ಸ್ಥಾನದಲ್ಲಿ ಕಾಯುತ್ತಿದ್ದೇನೆ ಎಂದರು. ಈ ಯುವತಿಯ ವಿದ್ಯಾಭ್ಯಾಸಕ್ಕಾಗಿ ತಮ್ಮ ಕುಟುಂಬದ ವತಿಯಿಂದ ಸನ್ಮಾನಿಸಿ 20 ಸಾವಿರ ನೀಡಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಹಾರೈಸಿದರು. ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಸೇರಿದಂತೆ ಇನ್ನಿತರರು ಇದ್ದರು.



