Uncategorized
ಥ್ರೋಬಾಲ್: ಮುದಗಲ್ ಕ್ರಿಸ್ತಜ್ಯೋತಿ ಪ್ರೌಢಶಾಲೆಯ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಹನುಮಂತ ನಾಯಕ ಸಂಪಾದಕ. 9739109997
ಮುದಗಲ್: 2025-26 ನೇ ಸಾಲಿನ ಲಿಂಗಸ್ಗೂರು ತಾಲೂಕು ಮಟ್ಟದಲ್ಲಿ ನಡೆದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಲಿಂಗಸ್ಗೂರು ತಾಲುಕಿನ ಮುದಗಲ್ ಪಟ್ಟಣದ
ಕ್ರಿಸ್ತಜ್ಯೋತಿ ಪ್ರೌಢಶಾಲೆಯ ಮಕ್ಕಳು ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಈ ಶಾಲೆಯ ಬಾಲಕಿಯರು ಸತತವಾಗಿ 6 ಬಾರಿ ಥ್ರೋಬಾಲ್ ಕ್ರೀಡೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಮಕ್ಕಳ ಸಾಧನೆಗೆ ಸಂತ ಅನ್ನಮ್ಮ ಶಿಕ್ಷಣ ಸಂಸ್ಥೆಯ ಸಂಚಾಲಕರು, ಹಾಗೂ ಕ್ರಿಸ್ತಜ್ಯೋತಿ ಪ್ರೌಢಶಾಲೆಯ ಮುಖ್ಯಗುರು, ವಂ ಸಿ ಮರಿಯಮ್ಮ, ದಾಕ್ಷಯಣಿ, ಕಲ್ಪನಾ, ಚೌರಮ್ಮ, ಸಮೀರಾ, ಸುಪ್ರಿಯಾ, ಅಲ್ತಾಫ್ ಆರ್ ಸಿ ಮೀಷನ್ ಮುಖ್ಯಗುರು ಸೇರಿದಂತೆ ದೈಹಿಕ ಶಿಕ್ಷಕ ರಮೇಶ್ ದೀಕ್ಷಿತ್ ಶುಭಹಾರೈಸಿದರು.



