Uncategorized

ಜಾತಿ ನಿಂದನೆ : ಬಂಧನಕ್ಕೆ ಬಸವರಾಜ ಹೂನೂರು ಆಗ್ರಹ

ಹನುಮಂತ ನಾಯಕ ಸಂಪಾದಕ.    9739109997

ಮುದಗಲ್ ಬೆಳಗಾವಿ ಡಿಸಿಸಿ ಚುನಾವಣೆ ವೇಳೆ ಜಾತಿ ನಿಂದನೆ ಮಾಡಿರುವ ಡಿಸಿಸಿ ಬ್ಯಾಂಕನ ಮಾಜಿ ಅಧ್ಯಕ್ಷ ರಮೇಶ ವಿಶ್ವನಾಥ ಕತ್ತಿ ರವರನ್ನು ಈ ಕೂಡಲೆ ಬಂಧಿಸಬೇಕು ಎಂದು ಕರ್ನಾಟಕ ವಾಲ್ಮೀಕಿ ನಾಯಕ ಯುವ ಪಡೆ ಮುದಗಲ್ ಹೋಬಳಿ ಘಟಕ ಅಧ್ಯಕ್ಷ ಬಸವರಾಜ ನಾಯಕ ಹೂನೂರು ಆಗ್ರಹಿಸಿದ್ದಾರೆ

ಸೋಮುವಾರ ಪತ್ರಿಕೆಗೆ ಹೇಳಿಕೆ ನೀಡಿರುವ ಅವರು
ಬೆಳಗಾವಿ ನಗರದ ಬಿ ಕೆ ಮಾಡೆಲ್ ಸ್ಕೂಲದ ಆವರಣದಲ್ಲಿ ಡಿಸಿಸಿ ಬ್ಯಾಂಕನ ಚುನಾವಣಾ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕನ ಮಾಜಿ ಅಧ್ಯಕ್ಷ ರಮೇಶ ವಿಶ್ವನಾಥ ಕತ್ತಿ, ಸಾ: ಬೆಲ್ಲದ ಬಾಗೇವಾಡಿ, ಬೆಳಗಾವಿ ಇವನು ವಾಲ್ಮೀಕಿ ಸಮುದಾಯ ಕುರಿತು ಬೇಡರ ಸೂಳೆ ಮಕ್ಕಳು ಎಂಬ ಅವಾಚ್ಯ ಶಬ್ದಗಳಿಂದ ಅವಮಾನಿಸಿದ್ದು ರಾಜ್ಯದ 60 ಲಕ್ಷ ವಾಲ್ಮೀಕಿ ಸಮುದಾಯದ ಮನಸ್ಸಿಗೆ ತಿವೃಘಾಸಿ ಮಾಡುವ ಮೂಲಕ ಸಮುದಾಯದ ಭಾವನೆಗಳಿಗೆ ದಕ್ಕೆ ಮಾಡಿದ್ದಾರೆ ಪ್ರತಿ ಚುನಾವಣೆ ಸಂದರ್ಭದಲ್ಲಿ ಸ್ಪರ್ಧೆ ಮಾಡಿದ ಅಭ್ಯರ್ಥಿಗಳಿಗೆ ಸೋಲು ಗೆಲುವು ಸಾಮಾನ್ಯ ಆದರೆ ಜಾತಿ ನಿಂದನೆ ಮಾಡಿರುವದ ಖಂಡನೀಯವಾಗಿದೆ ಈ ಕೂಡಲೆ ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ.

Hanumanth Nayaka

ಹನುಮಂತ ನಾಯಕ ಮಟ್ಟೂರಿನ ಸಾಂಸ್ಕೃತಿಕ ಪರಂಪರೆ ಮತ್ತು ಸಮಾಜಮುಖಿ ಚಟುವಟಿಕೆಗಳಿಗೆ ಶಕ್ತಿ ತುಂಬುತ್ತಿರುವ ಪ್ರಮುಖ ವ್ಯಕ್ತಿಗಳಲ್ಲೊಬ್ಬರಾದ ಹನುಮಂತ ನಾಯಕರು, “ಕಲ್ಯಾಣ ವೈಭವ” ಪತ್ರಿಕೆಯ ಗೌರವಾನ್ವಿತ ಸಂಪಾದಕರಾಗಿದ್ದಾರೆ. ಸಮೂಹ ಸೇವೆ, ಮಾಹಿತಿ ಹಂಚಿಕೆ ಮತ್ತು ಗ್ರಾಮೀಣ ಅಭ್ಯುದಯದ ಬಗ್ಗೆ ಅವರಿಗಿರುವ ಗಾಢ ಬದ್ಧತೆ ಅವರಿಗೆ ವಿಶಿಷ್ಟ ಗುರುತನ್ನು ತಂದಿದೆ. ಸಮಾಜದ ಪ್ರತಿಯೊಂದು ಮುಖ್ಯ ಕ್ಷಣ—ಮದುವೆ ಸಮಾರಂಭಗಳು, ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭಾವಂತರ ಸಾಧನೆಗಳು ಮತ್ತು ಗ್ರಾಮಾಭಿವೃದ್ಧಿ ಚಟುವಟಿಕೆಗಳನ್ನು ನಿಖರವಾಗಿ ದಾಖಲಿಸಿ ಜನತೆಗೆ ತಲುಪಿಸುವುದು ಅವರ ಮುಖ್ಯ ಧ್ಯೇಯ. ಅವರ ಸಂಪಾದಕೀಯ ಶೈಲಿ ಸ್ಪಷ್ಟ, ಜವಾಬ್ದಾರಿಯುತ ಮತ್ತು ಓದುಗರನ್ನು ಜತೆಗೇ ಸಾಗಿಸುವಂತಿದೆ. ಮಟ್ಟೂರು ಪ್ರದೇಶದಲ್ಲಿ ನಂಬಿಕೆ, ನಿಷ್ಠೆ ಮತ್ತು ಸೇವಾಭಾವನೆಗೆ ಪ್ರತೀಕವಾಗಿ ಗುರುತಿಸಿಕೊಂಡಿರುವ ಹನುಮಂತ ನಾಯಕರವರು, ತಮ್ಮ ಮಾಧ್ಯಮದ ಮೂಲಕ ಸಮಾಜದ ಒಗ್ಗಟ್ಟು, ಸಂಸ್ಕೃತಿ ಸಂರಕ್ಷಣೆ ಮತ್ತು ಜನಜಾಗೃತಿ ಮೂಡಿಸುವ ಪ್ರಯತ್ನಗಳಲ್ಲಿ ಸದಾ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಗ್ರಾಮದ ಅಭಿವೃದ್ದಿಗಾಗಿ ತಮ್ಮ ಜ್ಞಾನ, ಸಮಯ ಮತ್ತು ಶ್ರಮವನ್ನು ವಿನಯದಿಂದ ಹೂಡುತ್ತಿರುವ ಅವರ ಕೆಲಸವು ಮಟ್ಟುರು ಸಮುದಾಯಕ್ಕೆ ಅಮೂಲ್ಯ ಕೊಡುಗೆಯಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!